ಕಾಸರಗೋಡು: ಕನ್ನಡದ ನೆಲ ಕಾಸರಗೋಡಿನಲ್ಲಿ ನಾಡು ನುಡಿ ಸಂಸ್ಕøತಿ ಉಳಿಸಿ ಬೆಳೆಸುವಲ್ಲಿ ರಂಗ ಚಿನ್ನಾರಿ ಸಂಘಟನೆ ತನ್ನದೇ ಆದ ಕೊಡುಗೆ ನೀಡುತ್ತಿರುವುದಾಗಿ ರಾಷ್ಟ್ರ ಪ್ರಶಸ್ತಿ ವಿಜೇತ ಪತ್ರಕರ್ತ ಬಾ. ನಾ. ಸುಬ್ರಮಣ್ಯ ಹೇಳಿದರು.
ಅವರು ಕಾಸರಗೋಡು ಕರಂದಕ್ಕಾಡಿನ ಪದ್ಮಗಿರಿ ಕಲಾ ಕುಟೀರದಲ್ಲಿ ಜರಗಿದ ಅಂತಧ್ರ್ವನಿ -4 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕರೋಕೆ ಎಂದರೆ ಗಾಯನ ರಹಿತ ವಾದ್ಯ ಮೇಳ, ಗಾಯಕ ಗಾಯಕಿಯರ ಹಾಡಿಗೆ ಇದು ಹಿನ್ನೆಲೆಯನ್ನು ಕೊಡುತ್ತದೆ. ಸಾಂಕೇತಿಕವಾಗಿ ಇದು ಇಲ್ಲಿನ ಮೂಲಸೆಲೆಗೆ ಅಭಿಮಾನದ ದನಿಯನ್ನು ಸೇರಿಸುವ ಪ್ರಕ್ರಿಯೆಯಾಗಿದೆ. ಅಂತರ್ ಧ್ವನಿ ಕಾರ್ಯಕ್ರಮದ ಮೂಲಕ ಸ್ಥಳೀಯ ಗಾಯನ ಪ್ರತಿಭೆಗಳನ್ನು ಉತ್ತೇಜಿಸುವ ಕೆಲಸವನ್ನು ನಡೆಸುತ್ತಿರುವ ರಂಗ ಚಿನ್ನಾರಿ ಶ್ರಮ ಶ್ಲಾಘನೀಯ ಎಂದು ತಿಳಿಸಿದರು.
ತಂತ್ರಜ್ಞ, ಸಾಹಿತಿ ಮೈಸೂರಿನ ಉಮೇಶ್ ಇವರು ಮಾತನಾಡಿ "ಕನ್ನಡದ ಸಹೃದಯರನ್ನೆಲ್ಲಾ ಒಂದೆಡೆ ಸೇರಿಸಿ ಸಾಂಸ್ಕøತಿಕ ಕಲರವಗಳ ಮೂಲಕ ಧ್ವನಿಯಾಗುವ ರಂಗಚಿನ್ನಾರಿಯ ಆಶಯ ಅದ್ಭುತ. ಅಂತರಂಗದಲ್ಲಿರುವ ಪ್ರತಿಭೆ ಹೊರಹೊಮ್ಮಲು ವೇದಿಕೆಗಳ ಅಗತ್ಯವಿದೆ. ಕಾಸರಗೋಡಿನಲ್ಲಿ ಈ ತರಹದ ವೇದಿಕೆ ನಿಜಕ್ಕೂ ಜನ ಮೆಚ್ಚುವಂಥದ್ದು" ಎಂದರು.
ರಂಗ ಚಿನ್ನಾರಿಯ ನಿರ್ದೇಶಕರಾದ ಕೆ. ಸತೀಶ್ ಚಂದ್ರ ಭಂಡಾರಿ, ಕೆ. ಸತ್ಯನಾರಾಯಣ, ಸ್ವರ ಚಿನ್ನಾರಿಯ ರತ್ನಾಕರ ಓಡಂಗಲ್ಲು, ಅಕ್ಷತಾ ವರ್ಕಾಡಿ, ಉಷಾ ಟೀಚರ್, ಬಬಿತಾ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು. ರಂಗ ಚಿನ್ನಾರಿಯ ನಿರ್ದೇಶಕರು, ಸಂಚಾಲಕರೂ ಆಗಿರುವ ಕಾಸರಗೋಡು ಚಿನ್ನಾ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಕಾಸರಗೋಡಿನ ಹಲವಾರು ಗಾಯಕ ಗಾಯಕಿಯರು ಪಾಲ್ಗೊಂಡಿದ್ದರು.






