ಮಂಜೇಶ್ವರ: ಮೋದಿ ಆಡಳಿತದಲ್ಲಿ ದೇಶದ ಪ್ರಗತಿ ಇಂದು ಲೋಕಕ್ಕೆ ಮಾದರಿ. ಕೇರಳದಲ್ಲಿಯೂ ಇಂದು ಬಿಜೆಪಿ ಪ್ರಬಲ ಶಕ್ತಿ, ಗ್ರಾಮ ಗ್ರಾಮಗಳಲ್ಲಿ ಬಿಜೆಪಿ ಜನ ಸಾಮಾನ್ಯರಿಗೆ ಅನಿವಾರ್ಯ. ಕೇಂದ್ರ ಯೋಜನೆಗಳು ಇಂದು ಪ್ರತಿ ಫಲನುಭವಿಗಳ ಮನೆಮನೆಗಳಿಗೆ ತಲುಪುತ್ತಿದೆ. ಆದರೆ ಕೇರಳ ಸರ್ಕಾರ ಅವಾಸ್ ಯೋಜನೆ, ಅಯುಷ್ಮಾನ್ ಯೋಜನೆ, ಕೃಷಿ ಸಮ್ಮಾನ್ ಯೋಜನೆ, ಸರ್ವಶಿಕ್ಷ ಅಭಿಯಾನಗಳನ್ನು ಬುಡಮೇಲೂ ಗೊಳಿಸುತ್ತಿದೆ ಹಾಗೂ ಅನೇಕ ಯೋಜನೆಗಳನ್ನು ಹೆಸರು ಬದಲಾಯಿಸಿ ತನ್ನ ಯೋಜನೆ ಎಂಬತ್ತೆ ಬಿಂಬಿಸುತಿದೆ ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ. ಹೇಳಿದರು.
ಮೀಂಜ ಪಂಚಾಯತಿ ಮಟ್ಟದ ಬಿಜೆಪಿ ಕಾರ್ಯಕರ್ತರ ಕಾರ್ಯಾಗಾರ ಮೀಯಪದವುನಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ಸ್ಥಳೀಯ ಪಂಚಾಯತಿಗಳಲ್ಲಿ ಎಡರಂಗ -ಮುಸ್ಲಿಂ ಲೀಗ್ ಸಿದ್ಧಾಂತ ಬಿಟ್ಟು ಆಡಳಿತ ಮಾಡುತ್ತಿದೆ. ಮೀಂಜ, ವರ್ಕಾಡಿ ಹಾಗೂ ಬ್ಲಾಕ್ ಪಂಚಾಯತಿ ಕಳೆದ 5 ವರ್ಷದ ಆಡಳಿತ ಇದಕ್ಕೆ ಉದಾಹರಣೆ ಎಂದು ಹೇಳಿದರು.
ಜಿಲ್ಲಾ ಉಪಾಧ್ಯಕ್ಷ ಮುರಳೀಧರ ಯಾದವ್, ಹರೀಶ್ ನಾರಂಪಾಡಿ ಕಾರ್ಯಾಗಾರ ನಡೆಸಿ ಕೊಟ್ಟರು. ಚಂದ್ರಹಾಸ ಶೆಟ್ಟಿ ಬೇಜ್ಜ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಕೆ.ವಿ.ಭಟ್, ಯತೀರಾಜ್ ಶೆಟ್ಟಿ. ಶಾಲಿನಿ ಶೆಟ್ಟಿ, ಆಶಾಲತಾ ಬಿ.ಎಂ, ಎ.ಕೆ.ಕಯ್ಯಾರ್, ಶೇಖರ ಕೊಡಿ, ಗಣೇಶ್ ಭಟ್ ವಾರಾಣಸಿ, ನಾರಾಯಣ ತುಂಗ, ಜಯರಾಮ್ ಕುಳೂರು, ಗಂಗಾಧರ್ ದಡ್ಡಂಗಡಿ ನೇತೃತ್ವ ನೀಡಿದರು. ನಾರಾಯಣ ನಾಯ್ಕ್ ಸ್ವಾಗತಿಸಿ, ಮಂಜುನಾಥ್ ಭಂಡಾರಿ ವಂದಿಸಿದರು.




.jpg)

