ಮಂಜೇಶ್ವರ : ಗಡಿ ಪ್ರದೇಶದಲ್ಲಿ ಒಂದಲ್ಲ ಒಂದು ವಿಷಯದಲ್ಲಿ ಸುದ್ದಿಯಾಗುತ್ತಿರುವ ಕುಂಜತ್ತೂರು ಹಾಗೂ ಹೊಸಂಗಡಿ ಪೀಸ್ ಕ್ರಿಯೇಟಿವ್ ಶಾಲೆಗಳ ವಿದ್ಯಾರ್ಥಿಗಳು ಖ್ಯಾತ ಲೇಖಕರಾದ ಮಾಲಗತ್ತಾಯ, ರವೀಂದ್ರನಾಥ್ ಠಾಗೋರ್, ಎಸ್.ಎಲ್. ಭೈರಪ್ಪ, ಹಾಗೂ ಅಂಕಿತಾ ಜೈನ್ ಅವರ ಕೃತಿಗಳನ್ನು ಪುನರುಚ್ಚರಿಸಿಕೊಂಡು ರಾಷ್ಟ್ರೀಯ ವಾಚನಾ ದಿನವನ್ನು ಅದ್ದೂರಿಯಿಂದ ಆಚರಿಸಿಕೊಂಡರು.
ಪಾಠಶಾಲೆಗಳ ವಾಚನ ಸಂಸ್ಕೃತಿಯನ್ನು ಉತ್ತೇಜಿಸಲು ಹಾಗೂ ವಿದ್ಯಾರ್ಥಿಗಳಲ್ಲಿ ಓದುವ ಅಭಿರುಚಿಯನ್ನು ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದ ಶಾಲಾ ಪ್ರಾಂಶುಪಾಲರು ಓದು ವ್ಯಕ್ತಿತ್ವವಿಕಾಸಕ್ಕೆ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳು ವಿಭಿನ್ನ ಗುಂಪುಗಳಲ್ಲಿ ಭಾಗವಹಿಸಿ ತಮ್ಮ ಓದುವ ಶೈಲಿಯನ್ನು ಪ್ರದರ್ಶಿಸಿದರು. ಕೆಲವು ವಿದ್ಯಾರ್ಥಿಗಳು ಪುಸ್ತಕ ವಿಮರ್ಶೆಗಳನ್ನು ಮಂಡಿಸಿದರು. ಹಲವರು ಸ್ವಂತವಾಗಿ ಓದಿದ ಪುಸ್ತಕಗಳ ಬಗ್ಗೆ ಸಂಕ್ಷಿಪ್ತವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.




.jpg)
