ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿ 66ರ ಮಂಜೇಶ್ವರ ರಾಗಂ ಜಂಕ್ಷನ್ ಬಳಿ ಬಸ್ ಮತ್ತು ಕಾರು ಡಿಕ್ಕಿಯಾಗಿ ಗಂಭೀರಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವರ್ಕಾಡಿ ತೋಕೆ ನಿವಾಸಿ ಸಿಪ್ರಿಯನ್ ಡಿಸೋಜಾ ಅವರ ಪುತ್ರ ಕೆಲ್ವಿನ್ ಡಿಸೋಜಾ(18)ಭಾನುವಾರ ಮೃತಪಟ್ಟಿದ್ದಾರೆ.
ಶುಕ್ರವಾರ ಅಪಘಾತ ಸಂಭವಿಸಿದ್ದು, ಕೆಲ್ವಿನ್ ಡಿಸೋಜ, ಪ್ರಜ್ವಲ್ ಮತ್ತು ಪ್ರೀತಮ್ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ದಾಖಲಿಸಲಾಘಿದ್ದರೂ, ಕೆಲ್ವಿನ್ ಡಿ.ಸೋಜಾ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅಪಘಾತದ ಸಮಯದಲ್ಲಿ ಕೆಲ್ವಿನ್ ಡಿಸೋಜಾ ಅವರು ಕಾರಿನ ಹಿಂದಿನ ಸೀಟಿನಲ್ಲಿ ಕುಳಿತಿದ್ದರು. ಪ್ರಕಟಣಕ್ಕೆ ಸಂಬಂಧಿಸಿ ಮಂಜೇಶ್ವರ ಠಾನೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.




