ಕಾಸರಗೋಡು: ಆಲ್ ಕೇರಳ ಪೋಟೋಗ್ರಾಫರ್ಸ್ ಅಸೋಸಿಯೇಷನ್(ಎಕೆಪಿಎ) ವೆಸ್ಟ್ ಯೂನಿಟ್ ಇದರ ವತಿಯಿಂದ 2025-26 ವರ್ಷದ ಅಂಗನವಾಡಿ ಪ್ರವೇಶೋತ್ಸವದ ಅಂಗವಾಗಿ ಮಂಗಳವಾರ ನಗರದ 32 ನೇ ವಾರ್ಡಿನ ಅಂಗನವಾಡಿಯಲ್ಲಿ ಮಕ್ಕಳಿಗೆ ಸಿಹಿ ತಿಂಡಿ ನೀಡಿ ಸಂಭ್ರಮಿಸಲಾಯಿತು. ಯೂನಿಟ್ ಅಧ್ಯಕ್ಷ ವಸಂತ್ ಕೆರೆಮನೆ ಅವರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ವಾರ್ಡ್ ಕೌನ್ಸಿಲರ್ ಶ್ರೀಲತಾ ಟೀಚರ್, ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ ಸಮಿತಿ ಅಧ್ಯಕ್ಷ ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ, ಯೂನಿಟ್ ಕೋಶಾಧಿಕಾರಿ ಗಣೇಶ್ ರೈ, ಉಪಾಧ್ಕಕ್ಷ ಅಮಿತ್, ಸಾಂತ್ವನ ಸಂಯೋಜಕಿ ಶಾಲಿನಿ ರಾಜೇಂದ್ರನ್, ಮೈಂದಪ್ಪ ಕೆ.ಎಂ, ಚಂದ್ರಶೇಖರ ಎಂ, ಆಶಾ ಕಾರ್ಯಕರ್ತೆ ಶಶಿಕಲಾ ಮಕ್ಕಳ ಪೆÇೀಷಕರು, ಸಹಾಯಕಿ ರಜನಿ ಉಪಸ್ಥಿತರಿದ್ದರು. ಯುನಿಟ್ ಕಾರ್ಯದರ್ಶಿ ವಿಶಾಖ್ ಸ್ವಾಗತಿಸಿ, ಅಂಗನವಾಡಿ ಅಧ್ಯಾಪಕಿ ಪುಷ್ಪ ವಂದಿಸಿದರು.






