ಕಾಸರಗೋಡು: ಜಿಲ್ಲಾ ಬ್ಯಾಂಕಿಂಗ್ ಪ್ರಗತಿ ಪರಿಶೀಲನಾ ಸಭೆ ಕಾಸರಗೋಡು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆಯಿತು. ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ(ಎಡಿಎಂ)ಅಖಿಲ್ ಪಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಕಾಸರಗೋಡು ಜಿಲ್ಲಾ ಕ್ರೆಡಿಟ್ ಪ್ಲಾನ್ 2025-26ಕರಡು ಪ್ರತಿಯನ್ನು ಎಡಿಎಂ ಪಿ. ಅಖಿಲ್ ಬಿಡುಗಡೆಗೊಳಿಸಿದರು. ಲೀಡ್ ಬ್ಯಾಂಕ್ ಪ್ರಬಂಧಕ ಎಸ್. ತಿಪ್ಪೇಶ್ ಯೋಜನೆಯ ಬಗ್ಗೆ ಮಾಹಿತಿ ವಿವರಿಸಿದರು. ಆರ್‍ಬಿಐ ತಿರುವನಂತಪುರಂ ಎಲ್‍ಡಿಒ ಮ್ಯಾನೇಜರ್ ಟಿ.ಕೆ. ಶ್ರೀಕಾಂತ್ ಬ್ಯಾಂಕ್ ಚಟುವಟಿಕೆಗಳ ಬಗೆಗಿನ ಮಾಹಿತಿ ನೀಡಿದರು.
ನಬಾರ್ಡ್ ಡಿಡಿಎಂ ಶರೋನ್‍ವಾಸ್ ಕೃಷಿ ಕ್ಷೇತ್ರದ ಪ್ರಗತಿಯನ್ನು ವಿವರಿಸಿದರು. ಕೆನರಾ ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕ ಸಂತೋಷ್ ಕುಮಾರ್, ವಿವಿಧ ಇಲಾಖಾ ಮುಖ್ಯಸ್ಥರು ಮತ್ತು ಇತರರು ಭಾಗವಹಿಸಿದ್ದರು. ಎಎಸ್ಪಿ ಸಿ.ಎಂ.ದೇವದಾಸನ್ ಜಿಲ್ಲಾ ಮಟ್ಟಭದ್ರತಾ ಸಮಿತಿ ಸಭೆಯಲ್ಲಿನ ವಹಿವಾಟುಗಳಲ್ಲಿ ಭದ್ರತಾ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. 2025-26ನೇ ಸಾಲಿನ ಸಾಲ ಯೋಜನೆ ಬಗ್ಗೆ ಮಾಹಿತಿ ನೀಡಲಾಯಿತು. ಕೃಷಿ ವಲಯಕ್ಕೆ 7900 ಕೋಟಿ, ಎಂಎಸ್‍ಎಂಇಗೆ 2053 ಕೋಟಿ, ಸೇವಾ ವಲಯಕ್ಕೆ 547 ಕೋಟಿ ಸೇರಿದಂತೆ ಒಟ್ಟು 13,400 ಕೋಟಿ ಮೊತ್ತದ ಯೋಜನೆಯಾಗಿದೆ.


