ಕಾಸರಗೋಡು: 'ಪೋಶ್' ಕಾಯ್ದೆ-2013'ರ ಕುರಿತು ಕಾಸರಗೋಡು ಜಿಲ್ಲೆಯ ಸರ್ಕಾರಿ ಸಂಸ್ಥೆಗಳಲ್ಲಿನ ಆಂತರಿಕ ಸಮಿತ ಸದಸ್ಯರಿಗಾಗಿ ರಾಜ್ಯ ಮಹಿಳಾ ಆಯೊಗ ವತಿಯಿಂದ ಕಾಞಂಗಾಡ್ ವ್ಯಾಪಾರ ಭವನದಲ್ಲಿ ಕಾರ್ಯಾಗಾರ ಆಯೋಜಿಸಲಾಯಿತು.
ಕೆಲಸದ ಸ್ಥಳದಲ್ಲಿ ಮಹಿಳಾ ಉದ್ಯೋಗಿಗಳ ಮೇಲಿನ ದೌರ್ಜನ್ಯ ಹೆಚ್ಚುತ್ತಿರುವ ಕುರಿತು ಮಹಿಳಾ ಆಯೋಗಕ್ಕೆ ಲಭಿಸುತ್ತಿರುವ ದೂರುಗಳ ಹಿನ್ನೆಲೆಯಲ್ಲಿ 14 ಜಿಲ್ಲೆಗಳಲ್ಲಿಯೂ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತಿದೆ. ಕೇರಳ ರಾಜ್ಯ ಮಹಿಳಾ ಆಯೋಗದ ಸದಸ್ಯೆ, ವಕೀಲೆ ಪಿ. ಕುಞËಯಿಷಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಂಸ್ಥೆಗಳಲ್ಲಿ ಪೋಶ್ ಕಾಯ್ದೆ 2013 ರ ಅನ್ವಯ ಕಾರ್ಯನಿರ್ವಹಿಸುವ ಎಲ್ಲಾ ಆಂತರಿಕ ಸಮಿತಿಗಳನ್ನು ಬಲಪಡಿಸುವ ಅಗತ್ಯವಿದೆ ಎಂದು ತಿಳಿಸಿದರು.
ಸಾರ್ವಜನಿಕ ವಿಚಾರಣೆಗಳ ಮೂಲಕ ಆಯೋಗವು ಫಲಪ್ರದ ಚರ್ಚೆಗಳನ್ನು ನಡೆಸಿರುವುದಲ್ಲದೆ, ಮಹಿಳಾ ಆಯೋಗದ ಸದಸ್ಯರು, ಆಯೋಗದ ಮಧ್ಯಪ್ರವೇಶದಂದ ಸಿನಿಮಾ ಮತ್ತು ಧಾರಾವಾಹಿ ವಲಯಗಳಲ್ಲಿ ಆಂತರಿಕ ಸಮಿತಿಗಳನ್ನು ರಚಿಸಲು ಸಾಧ್ಯವಾಗಿದೆ ಎ<ದ ತಿಳಿಸಿದರು.
ಕಾಞಂಗಾಡ್ ಬ್ಲಾಕ್ ಪಂಚಾಯತ್ ಅಧ್ಯಕ್ಷ ಕೆ. ಮಣಿಕಂಠನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವಕೀಲೆ ಎಂ. ಆಶಾಲತಾ ಚರ್ಚೆಯ ನೇತೃತ್ವ ವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಅಧಿಕಾರಿ ಎಲ್. ಶೀಬಾ ಉಪಸ್ಥಿತರಿದ್ದರು. ಕೇರಳ ಮಹಿಳಾ ಆಯೋಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಸ್. ಸಂತೋಷ್ ಕುಮಾರ್ ಸ್ವಾಗತಿಸಿದರು.


