ಕಾಸರಗೋಡು: ಬಿರುಸಿನ ಮಳೆಗೆ ಇತಿಹಾಸಪ್ರಸಿದ್ಧ ಪ್ರವಾಸೋದ್ಯಮ ಕೇಂದ್ರ ಬೇಕಲ ಕೋಟೆಯ ಐದನೇ ಸಂಖ್ಯೆ ಪ್ರವೇಶ ದ್ವಾರದ ಸಮುದ್ರ ಭಾಗಕ್ಕಿರುವ ಕೋಟೆಯ ಒಂದು ಭಾಗ ಕುಸಿದು ಹಾನಿಗೀಡಾಗಿದೆ. ಕುಸಿತಕ್ಕೀಡಾದ ಜಾಗದಿಂದ ಅನತಿ ದೂರದಲ್ಲಿ ಕಳೆದ ವರ್ಷ ಕೆಂಪುಕಲ್ಲಿನ ಕಾಲ್ನಡೆಹಾದಿ ನಿರ್ಮಿಸಲಾಗಿದ್ದು, ಈ ಹಾದಿಗೂ ಕುಸಿಯುವ ಭೀತಿ ಎದುರಾಗಿದೆ. ಕೋಟೆಯ ಒಂದು ಪಾಶ್ರ್ವ ಕುಸಿತಕ್ಕೀಡಾಗಿರುವ ಹಿನ್ನೆಲೆಯಲ್ಲಿ ಈ ಭಾಗಕ್ಕೆ ಪ್ರವಾಸಿಗರ ಭೇಟಿ ನಿಷೇಧಿಸಲಾಗಿದೆ.





