ಕಾಸರಗೋಡು: ಮಾದಕ ದ್ರವ್ಯಗಳ ಬಳಕೆಯಿಂದ ಆರೋಗ್ಯ ಕೆಡುವುದರ ಜತೆಗೆ ಸಮಾಜವೂ ಹಾಳಾಗುವುದಾಗಿ ಕಾಸರಗೋಡು ಪಾರೆಕಟ್ಟ ಮಹಿಳಾ ಪೆÇಲೀಸ್ ಠಾಣೆಯ ಎಸ್‍ಸಿಪಿಒ ಕೆ.ರಾಜಲಕ್ಷ್ಮೀ ತಿಳಿಸಿದ್ದಾರೆ.
ಅವರು ಕಾಸರಗೋಡು ಬಾಲಭವನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳು ಹಾಗೂ ಅವರ ಪೆÇೀಷಕರಿಗಾಗಿ ಆಯೋಜಿಸಲಾಗಿದ್ದ ಮಾದಕ ದ್ರವ್ಯ ವಿರೋಧಿ ಜಾಗೃತಿ ಕಾರ್ಯಕ್ರಮದಲ್ಲಿ ತರಗತಿ ನಡೆಸಿದರು. ಕೆ.ವೆಂಕಟ್ರಮಣ ಹೊಳ್ಳ, ಅಸ್ಲಂ, ಶಾಲಾ ಮುಖ್ಯೋಪಾಧ್ಯಾಯಿನಿ ಲೀಲಾವತಿ ಕೆ.ನಾಯರ್, ಕೆ.ಜಯಂತಿ, ಆರತಿ ಉಪಸ್ಥಿರಿದ್ದರು.




