ಕಾಸರಗೋಡು: ಆರೋಗ್ಯ ವಲಯದಲ್ಲಿ ಕಾಸರಗೋಡು ಜಿಲ್ಲೆ ಎದುರಿಸುತ್ತಿರುವ ಗಂಭೀರ ಸಮಸ್ಯೆಯನ್ನು ಪರಿಹರಿಸಲು ಕೇರಳ ಸರ್ಕಾರ ಮುಂದಾಗುವಂತೆ ಬಿಜೆಇ ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷೆ ಎಂ.ಎಲ್ ಅಶ್ವಿನಿ ಆಗ್ರಹಿಸಿದ್ದಾರೆ.
ಲೋಕಸೇವಾ ಆಯೋಗ(ಪಿ.ಎಸ್ ಸಿ) ದ ಮೂಲಕ ಸರ್ಕಾರಿ ನೇಮಕಾತಿ ಪಡೆದ 36ವೈದ್ಯರುಗಳ ಪೈಕಿ ಕಾಸರಗೋಡಿನಲ್ಲಿ ಕೇವಲ 19ಮಂದಿ ಸೇವೆಗೆ ಹಾಜರಾಗಿದ್ದು, ಇವರಲ್ಲಿ ಇಬ್ಬರಮ್ಮು ಹೊರತುಪಡಿಸಿ, ಉಳಿದ 17ಮಂದಿ ಕೂಡಾ ಉನ್ನತ ಶಿಕ್ಷಣದ ಹೆಸರಲ್ಲಿ ತಮ್ಮ ಹುದ್ದೆಗೆ ರಜೆ ಹಾಕಿ ತೆರಳಿದ್ದಾರೆ! ಇದರಿಂದ ಜಿಲ್ಲೆಗೆ ನೇಮಕಗೊಂಡಿರುವ 36ಮಂದಿ ವೈದ್ಯರಲ್ಲಿ ಇಬ್ಬರು ವಐದ್ಯರ ಸೇವೆ ಮಾತ್ರ ಲಭಿಸುವಂತಾಗಿದೆ. ಆರೋಗ್ಯ ರಂಗದಲ್ಲಿ ಅತ್ಯಂತ ಹಿಂದುಳಿದಿರುವ ಕಾಸರಗೋಡಿನಲ್ಲಿ ನೂರಾರು ಮಂದಿ ಬಡ ರೋಗಿಗಳು ತಮ್ಮ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಯನ್ನು ಆಶ್ರಯಿಸಿರುತ್ತಾರೆ. ಆದರೆ ವೈದ್ಯರ ಕೊರತೆಯಿಂದ ಬಡಜನರಿಗೆ ಸಕಾಲಕ್ಕೆ ಚಿಕಿತ್ಸೆ ಲಭ್ಯವಾಗದೆ ಸಂಕಷ್ಟ ಅನುಭವಿಸಬೇಕಾಗುತ್ತಿದೆ. ಈ ಕಾರಣದಿಂದ ಯೋಗ್ಯ ವೈದ್ಯರನ್ನು ನೇಮಿಸಿ ಖಾಲಿ ಹುದ್ದೆ ಭರ್ತಿಗೊಳಿಸಬೇಕು ಅಥವಾ ಪರ್ಯಾಯ ವ್ಯವಸ್ಥೆ ಮಾಡುವಂತೆ ಅವು ಆಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ಮರೀಚಿಕೆಯಾಗಿದೆ. ಜಿಲ್ಲೆಯ ಹಿಂದುಳಿದಿರುವಿಕೆಯಿಂದಾಗಿ ಸರ್ಕಾರಿ ನೇಮಕಾತಿ ಲಭಿಸದರೂ, ಜಿಲ್ಲೆಯಲ್ಲಿ ಸೇವೆ ಸಲ್ಲಿಸಲು ಬಯಸದೇ ಇತರ ಜಿಲ್ಲೆಗೆ ವರ್ಗಾವಣೆಪಡೆದುಕೊಳ್ಳಲು ಸರ್ಕಾರಿ ನೌಕರರು ಉತ್ಸುಕರಾಗಿರುತ್ತಾರೆ. ಈ ಸಮಸ್ಯೆಗೆ ಕೇರಳವನ್ನು ಅದಲುಬದಲಾಗಿ ಆಡಳಿತ ನಡೆಸಿರುವ ಎಡ ಹಾಗೂ ಐಕ್ಯರಂಗಗಳು ಕಾರಣವಾಗಿದ್ದು, ಇದಕ್ಕೆ ಪ್ರತಿಪಕ್ಷ ಕಾಂಗ್ರೆಸ್ ಉತ್ತರ ನೀಡಬೇಕೆಂದು ತಿಳಿಸಿದರು.
ನಾಗರಿಕ ಕಾಳಜಿ ಹಾಗೂ ಸಾಮಾಜಿಕ ಬದ್ಧತೆಯಿಂದ ಸರ್ಕಾರಿ ಸಿಬಂದಿ, ಕಾಸರಗೋಡಿನ ಕುರಿತಾದ ತಮ್ಮ ಧೋರಣೆ ಬದಲಿಸಬೇಕು ಮತ್ತು ವೈದ್ಯರು ಸಹಿತ ಸರ್ಕಾರಿ ನೌಕರರು ತಮ್ಮ ಸೇವೆಯಲ್ಲಿ ಮತ್ತಷ್ಟು ಸಕ್ರಿಯರಾಗಲು ಗಮನಹರಿಸಬೇಕು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.





