ನವದೆಹಲಿ : ದೇಶದಲ್ಲಿ ಏರ್ ಕಂಡೀಷನ್ ಮೆಷಿನ್‌ಗಳಿಗೆ ಹೊಸ ರೂಲ್ಸ್ ಜಾರಿ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಹೊಸ ನಿಯಮದಲ್ಲಿ ಎಸಿ ಮಷಿನ್ಗಳಿಗೆ ಸ್ಟಾಂಡರ್ಡ್ ಟೆಂಪರೇಚರ್ ನಿಗದಿಪಡಿಸಲಾಗುತ್ತಿದ್ದು, ಹೊಸ AC ಹಾಗೂ ಹಾಲಿ ಇರುವ ACಗಳಿಗೂ ಈ ಹೊಸ ನಿಯಮ ಅನ್ವಯ ಆಗುತ್ತಿದೆ.
ದೇಶದಲ್ಲಿ ಸದ್ಯ ಬಳಕೆಯಲ್ಲಿರುವ ACಗಳಲ್ಲಿ 18 ಡಿಗ್ರಿ ಸೆಲ್ಸಿಯಸ್‌ನಿಂದ 30 ಡಿಗ್ರಿ ಸೆಲ್ಸಿಯಸ್‌ವರೆಗೂ ಉಷ್ಣಾಂಶ ಏರಿಳಿತ ಮಾಡಬಹುದು. ಇನ್ಮುಂದೆ 20 ಡಿಗ್ರಿ ಸೆಲ್ಸಿಯಸ್‌ನಿಂದ 28 ಡಿಗ್ರಿ ಸೆಲ್ಸಿಯಸ್‌ವರೆಗೂ ಮಾತ್ರ ಉಷ್ಣಾಂಶ ಬಳಕೆ ಮಾಡಬೇಕು.
ಸದ್ಯದಲ್ಲೇ ಮನೆ ಹಾಗೂ ವಾಣಿಜ್ಯ ಕಟ್ಟಡಗಳಿಗೆ ಅನ್ವಯವಾಗುವಂತೆ ಈ ಹೊಸ ನಿಯಮವನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಹೊಸ ರೂಲ್ಸ್‌ನಲ್ಲಿ ಮನೆ ಅಥವಾ ವಾಣಿಜ್ಯ ಕಟ್ಟಡಗಳಲ್ಲಿ ಬಳಸುವ ಎಸಿಗಳು 20 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಕೂಲ್ ಮಾಡುವಂತಿಲ್ಲ. 28 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ಉಷ್ಣಾಂಶ ಇರದಂತೆ ಮಾಡಲಾಗುತ್ತದೆ.
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಖಟ್ಟರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. AC ಗಳಲ್ಲಿ ಉಷ್ಣಾಂಶವನ್ನು ತೀರಾ ಕಡಿಮೆ ಮಾಡಿದ್ರೆ ಹೆಚ್ಚಿನ ವಿದ್ಯುತ್ ಬಳಕೆಯಾಗುತ್ತೆ. ದೇಶದಲ್ಲಿ ವಿದ್ಯುತ್ ಬಳಕೆಯ ಮೇಲೆ ನಿಯಂತ್ರಣ ಸಾಧಿಸುವ ಉದ್ದೇಶದಿಂದ ACಗಳಿಗೆ ಸ್ಟಾಂಡರ್ಡ್ ಟೆಂಪರೆಚರ್ ನಿಗದಿಪಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
AC ಹೊಸ ರೂಲ್ಸ್‌ನಿಂದ ಲಾಭವೇನು?
ಇತ್ತೀಚೆಗೆ ನಗರ ಪ್ರದೇಶಗಳಲ್ಲಿ ಎಸಿ ಬಳಕೆ ಹೆಚ್ಚಾಗುತ್ತಿದೆ. ಮಾಲಿನ್ಯ ತಡೆಗಟ್ಟುವುದಕ್ಕಾಗಿ ಹೊಸ ನಿಯಮ ಜಾರಿಗೆ ತರಲಾಗುತ್ತಿದೆ. ದೇಶದಲ್ಲಿ ACಯ ಹೊಸ ರೂಲ್ಸ್ ಜಾರಿಯಿಂದ ಪವರ್ ಗ್ರಿಡ್ ಮೇಲಿನ ಒತ್ತಡವೂ ಕಡಿಮೆಯಾಗುತ್ತೆ.
ಮನೆ, ವಾಣಿಜ್ಯ ಕಟ್ಟಡಗಳಿಗೆ ಸದ್ಯದಲ್ಲೇ ಹೊಸ ನಿಯಮ ಜಾರಿಗೊಳಿಸಲಾಗುತ್ತಿದೆ. ಎಸಿ ಉತ್ಪಾದಿಸುವರೇ ಹೊಸ ನಿಯಮಕ್ಕೆ ಅನುಗುಣವಾಗಿ ಎಸಿ ತಯಾರಿಸಬೇಕು. ಹೊಸ ರೂಲ್ಸ್ ಜಾರಿಯನ್ನು ಕೇಂದ್ರ ಸರ್ಕಾರವೇ ಗಮನಿಸುತ್ತದೆ.




