ಮಂಜೇಶ್ವರ: ಕೊಡ್ಲಮೊಗರು ಶ್ರೀ ವಾಣಿವಿಜಯ ಹೈಸ್ಕೂಲ್ ನಲ್ಲಿ ಮಾದಕ ವಸ್ತುಗಳ ವಿರೋಧಿ ದಿನವನ್ನು ಆಚರಿಸಲಾಯಿತು. ಸ್ಕೌಟ್ ಹಾಗು ಗೈಡ್ಸ್ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಸಾಗಿ ಮಾದಕ ವಸ್ತುಗಳ ವಿರುದ್ಧ ಘೋಷಣೆಗಳನ್ನೂ ಕೂಗಿದರು. ಮಾದಕ ವಸ್ತು ಗಳ ವಿರುದ್ಧ ಪ್ರತಿಜ್ಞೆಯನ್ನು ಎಲ್ಲ ವಿದ್ಯಾರ್ಥಿಗಳು ಕೈಗೊಂಡರು. ಪ್ರಭಾರ ಮುಖ್ಯ ಶಿಕ್ಷಕಿ ಆರತಿ ಟೀಚರ್ ವಿದ್ಯಾರ್ಥಿಗಳು ಮಾದಕ ವಸ್ತುಗಳ ಬಲೆಯಲ್ಲಿ ಬೀಳಬಾರದು. ಒಳ್ಳೆಯ ಆರೋಗ್ಯಕರ ಅಭ್ಯಾಸಗಳಾನ್ನು ಮೈಗೂಡಿಸಲು ಕರೆ ಕೊಟ್ಟರು. ದೈಹಿಕ ಶಿಕ್ಷಣ ಶಿಕ್ಷಕ ಉದಯ ಸರಳ ವ್ಯಾಯಾಮವನ್ನೂ ಕಲಿಸಿ ಕೊಟ್ಟರು. ನಂತರ ವಿದ್ಯಾರ್ಥಿಗಳಿಂದ zumbha ಡ್ಯಾನ್ಸ್ ಮಾಡಿಸಲಾಯಿತು. ಸ್ಕೌಟ್ ಅಧ್ಯಾಪಕ ಸತ್ಯ ಶಂಕರ್ ಕಾರ್ಯಕ್ರಮ ವನ್ನು ಸಂಘಟಿಸಿದರು.


