ಕುಂಬಳೆ: ರಾತ್ರಿ ವೇಳೆ ಬೀಸಿದ ಬಲವಾದ ಗಾಳಿಗೆ ಸಿಲುಕಿ ಕುಂಬಳೆಯಲ್ಲಿ ಗೂಡಂಗಡಿ ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ ಪೆಟ್ಟಿಗೆ ಹಾರಿಹೋಗಿ ರಸ್ತೆಗೆ ಬಿದ್ದ ಘಟನೆ ನಡೆದಿದೆ. ಬದಿಯಡ್ಕ-ಕುಂಬಳೆ ಕೆ.ಎಸ್.ಟಿ.ಪಿ ರಸ್ತೆಯಲ್ಲಿ ಕುಂಬಳೆ ಪೆಟ್ರೋಲ್ ಪಂಪ್ ಸಮೀಪ ಘಟನೆ ನಡೆದಿದೆ. ಮೊಯ್ದು ಎಂಬವರ ಗೂಡಂಗಡಿ ಹಾಗೂ ಹಸಿರು ಕ್ರಿಯಾಸೇನೆ ಸಂಗ್ರಹಿಸುವ ಪ್ಲಾಸ್ಟಿಕ್ ಸಾಮಾಗ್ರಿಗಳನ್ನು ಇರಿಸಲು ಕಬ್ಬಿಣದ ಸರಳು ಬಳಿಸಿ ನಿರ್ಮಿಸಿದ ಪೆಟ್ಟಿಗೆ ರಸ್ತೆ ಮೇಲೆ ಬಿದ್ದಿದೆ. ಈ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಕೂಡಲೇ ಪೊಲೀಸ್ ಹಾಗೂ ಅಗ್ನಿಶಾಮಕ ದಳ ತಲುಪಿ ಗೂಡಂಗಡಿ ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ಪೆಟ್ಟಿಗೆಯನ್ನು ರಸ್ತೆಯಿಂದ ತೆರವುಗೊಳಿಸಿದರು.


