ಕುಂಬಳೆ: ಕುಂಬಳೆ-ಬದಿಯಡ್ಕ ಕೆಎಸ್‍ಟಿಪಿ ರಸ್ತೆಯಲ್ಲಿ ವಾಹನ ಅಪಘಾತ ನಡೆದಿದೆ. ರಸ್ತೆ ಬದಿ ಚರಂಡಿಯ ಸ್ಲಾಬ್ ಕುಸಿದು ಪಿಕಪ್ ವಾಹನ ಸಿಲುಕಿಗೊಂಡಿದೆ. ಗುರುವಾರ ಸಂಜೆ 7 ಗಂಟೆಗೆ ಕುಂಬಳೆ ಭಾಸ್ಕರ ನಗರದಲ್ಲಿ ಅಪಘಾತವುಂಟಾಗಿದೆ. ಭಾಸ್ಕರ ನಗರದ ಕಟ್ಟಿಗೆ ಹೇರಿ ಪಿಕಪ್ ವಾಹನ ತಲುಪಿತ್ತು. ರಸ್ತೆಯಿಂದ ಡಿಪೋದತ್ತ ಸಾಗುತ್ತಿದ್ದಂತೆ ಸ್ಲಾಬ್ ಕುಸಿದು ಹಿಂಭಾಗದ ಚಕ್ರಗಳು ಸಿಲುಕಿಗೊಂಡಿವೆ. ಬಳಿಕ ಸೌದೆಯನ್ನು ತೆರವುಗೊಳಿಸಿ ಜೆಸಿಬಿ ಬಳಸಿ ವಾಹನವನ್ನು ಮೇಲಕ್ಕೆತ್ತಲಾಯಿತು. ಇತ್ತೀಚೆಗಷ್ಟೇ ಕುಂಬಳೆಯಲ್ಲಿ ಚರಂಡಿಯ ಸ್ಲಾಬ್ ಕುಸಿದು ಲಾರಿಯೊಂದು ಮಗುಚಿಬಿದ್ದು ಚಾಲಕ ಗಾಯಗೊಂಡ ಘಟನೆ ನಡೆದಿತ್ತು. ನಿರ್ಮಾಣದ ಸಂದರ್ಭದಲ್ಲಿ ಉಂಟಾದ ಕಳಪೆ ಕಾಮಗಾರಿಯೇ ಪದೇ ಪದೇ ಚರಂಡಿಯ ಸ್ಲಾಬ್ ಕುಸಿಯಲು ಕಾರಣವೆಂದು ಹೇಳಲಾಗುತ್ತಿದೆ.

.jpg)
