ಉಪ್ಪಳ: ಮಾದಕ ದ್ರವ್ಯ ವಿರುದ್ಧ ಅಭಿಯಾನದಂಗವಾಗಿ ನಿವೃತ್ತ ಎಸ್.ಐ ಶಾಜಹಾನ್ ಕೊಲ್ಲಂನಿಂದ ಸೈಕಲ್‍ನಲ್ಲಿ ಆರಂಭಿಸಿದ ಯಾತ್ರೆಗೆ ಪೈವಳಿಕೆ ನಗರ ಶಾಲೆಯಲ್ಲಿ ಸ್ವಾಗತ ನೀಡಲಾಯಿತು.
ಮಾದಕ ದ್ರವ್ಯಗಳು ಉಂಟು ಮಾಡುತ್ತಿರುವ ದುಷ್ಪರಿಣಾಮಗಳ ಬಗ್ಗೆ ಅವರು ಮಕ್ಕಳಿಗೆ ತಿಳಿಸಿದರು. ಮುಖ್ಯೋಪಾಧ್ಯಾಯಿನಿ ರಾಧಾಲಕ್ಷ್ಮಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದರು. ಅಧ್ಯಾಪಕರಾದ ಲತೀಫ್, ರಾಜೇಶ್, ರೈನಾ ಡಿ'ಸೋಜಾ, ಬಬಿತಾ ಮೊದಲಾದವರು ಉಪಸ್ಥಿತರಿದ್ದರು.




