ಮಂಜೇಶ್ವರ: ಶಾರದಾ ಆಟ್ರ್ಸ್ ಕಲಾವಿದೆರ್ ಹಾಗು ಐಸಿರಿ ಕಲಾವಿದರು ಮಂಜೇಶ್ವರ ಇವರ ನೂತನ ತುಳು ಚಾರಿತ್ರಿಕ ಮತ್ತು ಸಾಮಾಜಿಕ ನೀತಿಬೋಧಕ ನಾಟಕ'ಜೈ ಭಜರಂಗ ಬಲಿ'ಹಾಗೂ ತುಳು ಸಾಮಾಜಿಕ ಹಾಸ್ಯಮಯ ನಾಟಕ 'ದಾನೆ ದೇವರೆ'ಇದರ ಶುಭ ಮುಹೂರ್ತ ಕಡಂಬಾರು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದಲ್ಲಿ ನಡೆಯಿತು.
ದೇಗುಲದ ಪ್ರಧಾನ ಅರ್ಚಕ ಶ್ರೀಕಾಂತ ರಾವ್ ನಾಟಕದ ಪೆÇೀಸ್ಟರ್ ಬಿಡುಗಡೆ ಮಾಡುವ ಮೂಲಕ ಮುಹೂರ್ತ ನೆರವೇರಿಸಿದರು. ತಂಡದ ಮಾಲಿಕ ಕೃಷ್ಣ ಜಿ. ಮಂಜೇಶ್ವರ, ಜಯಲಕ್ಷ್ಮಿ ಹಾಗು ತಂಡದ ಸದಸ್ಯರು ಉಪಸ್ಥಿತರಿದ್ದರು. ಆಗಸ್ಟ್ ತಿಂಗಳಲ್ಲಿ ಪ್ರಥಮ ಪ್ರದರ್ಶನ ನೆಯಲಿದೆ. ತಂಡದ ಈ ಮೊದಲಿನ ನಾಟಕಗಳಾದ ಕಥೆ ಎಡ್ಡೆ ಉಂಡು 250 ಪ್ರದರ್ಶನ ಹಾಗು ಕಲ್ಜಿಗದ ಮಾಯ್ಕಾರೆ ಪಂಜುರ್ಲಿ 150ಕ್ಕೂ ಹೆಚ್ಚಿನ ಪ್ರದರ್ಶನ ಕಂಡಿರುವುದಾಗಿ ಕೃಷ್ಣ ಜಿ. ಮಂಜೇಶ್ವರ ತಿಳಿಸಿದ್ದಾರೆ.





