ಮಂಜೇಶ್ವರ: ಯಶಸ್ವಿ ಕಲಾವಿದೆರ್ ಮಂಜೇಶ್ವರ ತಂಡದ 10 ನೇ ವರ್ಷದ ನಾಟಕ `ಮಂಗಳಗಿರಿ'ಯ ಶುಭ ಮುಹೂರ್ತ ಹಾಗೂ ಪೆÇೀಸ್ಟರ್ ಬಿಡುಗಡೆ ಕಾರ್ಯಕ್ರಮ ಮಂಜೇಶ್ವರ ಹೊಸಬೆಟ್ಟು ಜಮ್ಮದಮನೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನಡೆಯಿತು. ಕ್ಷೇತ್ರದ ಅರ್ಚಕÀ ರಾಮಚಂದ್ರ ಐತಾಳ್ ಬಡಾಜೆ ಕ್ಷೇತ್ರ ಮಾತೆಗೆ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು. ನೂತನ ನಾಟಕದ ಪೆÇೀಸ್ಟರ್‍ನ್ನು ನಾಟಕದ ನಿರ್ದೇಶಕರಾದ ಎಂ.ಎಸ್.ರವಿ ವರ್ಕಾಡಿ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು `ಯಶಸ್ವಿ ಕಲಾವಿದರು' ಸಂಸ್ಥೆಯು ಹಲವು ವರ್ಷಗಳಿಂದ ರಂಗಭೂಮಿಯಲ್ಲಿ ಯುವ ಪ್ರತಿಭೆಗಳಿಗೆ ವೇದಿಕೆ ನೀಡುವ ಮೂಲಕ ತಲ ಮಟ್ಟದಿಂದ ಬಹು ಮಟ್ಟಕೇರಲು ಪ್ರೋತ್ಸಾಹ ನೀಡುತ್ತಾ ಬಂದಿದೆ. ಇದುವೇ ನಮ್ಮ ತಂಡದ ಮುಖ್ಯ ದ್ಯೇಯವಾಗಿತ್ತು. ಇಲ್ಲಿರುವ ಅದೆಷ್ಟೋ ಕಲಾವಿದರು ಬೆಳಗಿ, ಸಿನಿಮಾ ಲೋಕದಲ್ಲಿ ನಟಿಸುತ್ತಿದ್ದು ಇದು ಯಶಸ್ವಿಗೆ ಮುನ್ನುಡಿಯಾಗಿದೆ. ಈ ಬಾರಿಯ `ಮಂಗಳಗಿರಿ' ನಾಟಕವು ವಿಭಿನ್ನವಾಗಿದ್ದು, ಕುತೂಹಲದಿಂದ ಕೂಡಿ, ಹಾಸ್ಯ ಮಿಶ್ರಿತವಾಗಿದೆ. ಈಗಾಗಲೇ ಹಲವು ಕಡೆಗಳಲ್ಲಿ ಪ್ರದರ್ಶನ ನೀಡಲು ದಿನಾಂಕ ಕೂಡಾ ನಿಗದಿಯಾಗಿದೆ ಎಂದರು.
ಈ ವೇಳೆ ನಾಟಕ ತಂಡದ ರೂವಾರಿ ಜೀವನ್ ಮಂಜೇಶ್ವರ, ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ದೈವಗಳ ಕ್ಷೇತ್ರದ ಅಣ್ಣ ದೈವದ ಪಾತ್ರಿ ಶ್ರೀ ರಾಜ ಬೆಳ್ಚಪ್ಪಾಡ, ಜಮ್ಮದಮನೆ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ಶಶಿಧರ ಶೆಟ್ಟಿ ಜಮ್ಮದ ಮನೆ, ಬಾಲಕೃಷ್ಣ ಶೆಟ್ಟಿ ಜಮ್ಮದ ಮನೆ, ಶಾರದಾ ಕಲಾ ಆಟ್ರ್ಸ್ ಮಂಜೇಶ್ವರದ ರಾಜೇಶ್ ಮುಗುಳಿ, ಪುಷ್ಪರಾಜ್ ಶೆಟ್ಟಿ ಕುಳೂರು, ಪಾವನ ಕಲಾವಿದರು ಕುಂಪಲದ ಕಿಶೋರ್ ಕುಂಪಲ, ನಾಟಕ ತಂಡದ ಪ್ರಮುಖರಾದ ಸಚಿನ್ ಕುಂಪಲ, ಗಗನ್ ಕದ್ರಿ, ನಿಖಿಲ್ ಮರೋಳಿ, ಚಂದ್ರಕಲಾ ವಾಮಂಜೂರು, ಯಶ್ ಕುಂಜತ್ತೂರು, ಪ್ರಮೋದ್ ತಲಪ್ಪಾಡಿ, ಯಶಸ್ವಿ ಪುತ್ತೂರು, ಸುರೇಶ್ ಪುತ್ತೂರು ಮೊದಲಾದವರು ಉಪಸ್ಥಿತರಿದ್ದರು. ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ದೈವಗಳ ಕ್ಷೇತ್ರದ ಅಣ್ಣ ದೈವದ ಬಂಡಾರ ಮನೆಯ ಸನ್ನಿಧಿಯಲ್ಲಿ ಪಾತ್ರಿಗಳಾದ ಶ್ರೀ ರಾಜ ಬೆಳ್ಚಪ್ಪಾಡರವರು ವಿಶೇಷ ಪ್ರಾರ್ಥನೆ ನೆರವೇರಿಸಿದರು.




.jpg)
