ಮುಳ್ಳೇರಿಯ: ಸುಮಾರು 45 ವರ್ಷಗಳ ಹಿಂದೆ, ಸ್ಥಳೀಯರ ಸಮಿತಿಯೊಂದನ್ನು ರಚಿಸಿ ವಹಿಸಿಕೊಂಡ ಮೇಲ್ಪರಂಬ ಕೂವತ್ತೊಟ್ಟಿ ಮಾವುಕೋಡ್ ಅರಮಂಗಾನಂ ಶ್ರೀ ರಕ್ತೇಶ್ವರಿ, ಗುಳಿಗ ದೈವಸ್ಥಾನ ಇಂದು ಒಂದು ಕಾರಣಿಕ ಶಕ್ತಿಯಾಗಿ, ಭಕ್ತರಭಿಷ್ಠೆಯನ್ನು ನೆರವೇರಿಸಿ ಕೊಡುವ ಒಂದು ಶ್ರದ್ಧಾ ಕೇಂದ್ರವಾಗಿ ಬೆಳೆದುನಿಂತಿದೆ. ಆದರೆ ಇಂದಿನ ದಿನದಲ್ಲಿ ಪ್ರಸ್ತುತ ಶ್ರೀ ರಕ್ತೇಶ್ವರಿ-ಗುಳಿಗ ದೈವಸ್ಥಾನದ ಪ್ರತಿಷ್ಠಾ ಮಂಟಪ ಕುಸಿದುಹೋಗಿದ್ದು, ಸ್ಥಳಮಿತಿ ಕಾರಣದಿಂದ ದುಸ್ಥಿತಿಗೆ ತಲುಪಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಸಮಿತಿಯ ನೇತೃತ್ವದಲ್ಲಿ ದೈವಸ್ಥಾನದಲ್ಲಿ ನಡೆದ ದೇವ ಚಿಂತನೆ ಸಭೆಯಲ್ಲಿ, ಹಳೆಯ ಮಂಟಪವನ್ನು ತೆರವುಗೊಳಿಸಿ ಹೊಸದಾಗಿ ನಿರ್ಮಿಸಿ, ಸುತ್ತು ಗೋಪುರ ಮತ್ತು ಇನ್ನಿತರ ಅವಶ್ಯ ಕೆಲಸಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿತ್ತು. ಇದರ ಸಲುವಾಗಿ, ನವೀಕರಣ ಕಾರ್ಯಗಳನ್ನು ಆರಂಭಿಸುವ ಕುರಿತು ಚರ್ಚಿಸಲು ಹಾಗೂ ಜೀರ್ಣೋದ್ಧಾರ ಸಮಿತಿ ರೂಪಿಸಲು ಅರಮಂಗಾನಂ ತುಕ್ಕೋಚಿವಳಪ್ಪು ಶ್ರೀ ವಯನಾಡು ಕುಲವನ್ ಸನ್ನಿಧಿಯಲ್ಲಿ ಸ್ಥಳೀಯರ ಮಹಾಸಭೆ ಏರ್ಪಡಿಸಲಾಗಿತ್ತು.
ಸಮಿತಿ ಅಧ್ಯಕ್ಷ ಗಣೇಶ್ ಅರಮಂಗಾನಂ ಅವರ ಅಧ್ಯಕ್ಷತೆಯಲ್ಲಿ ಸೇರಿದ ಮಹಾಸಭೆಯಲ್ಲಿ ಕಾರ್ಯದರ್ಶಿ ಎಚ್.ದಿವಾಕರ, ರಕ್ಷಾಧಿಕಾರಿ ಎಂ.ಕಣ್ಣನ್ ಕುನ್ನುಮ್ಮಲ್, ಕೋಶಾಧಿಕಾರಿ ಸಿ.ಕುಂಞÂರಾಮನ್ ಮುಂತಾದವರು ಮಾತನಾಡಿದರು. ಆರು ತಿಂಗಳಿನೊಳಗೆ ನವೀಕರಣ ಕಾರ್ಯಗಳನ್ನು ಪೂರ್ತಿಕರಿಸಿ ಉಳಿದ ಅನುಬಂಧ ಕೆಲಸಗಳನ್ನು ನಡೆಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಈ ಎಲ್ಲಾ ಚಟುವಟಿಕೆಗಳಿಗಾಗಿ ಬೇಕಾಗಿ ಜೀರ್ಣೋದ್ದಾರ ಸಮಿತಿ ಹಾಗೂ ಮಾತೃ ಸಮಿತಿಯನ್ನು ರೂಪಿಕರಿಸಲಾಯಿತು.
ರಕ್ಷಾಧಿಕಾರಿಯಾಗಿ ಪಿ.ವಿ.ಜಯರಾಜನ್ ಮಾಸ್ತರ್, ಎಂ.ಕಣ್ಣನ್ ಕುನ್ನುಮ್ಮಲ್, ಕಣ್ಣನ್ ಮೇಸ್ತ್ರಿ ಉಲೂಜಿ, ಕೃಷ್ಣನ್ ತುಕ್ಕೋಚಿವಳಪ್ಪು, ಪಿ.ವಿ.ಗಂಗಾಧರನ್ ಕೂವತೊಟ್ಟಿ, ಅಧ್ಯಕ್ಷರಾಗಿ ಗಣೇಶ್ ಅರಮಂಗಾನಂ, ಉಪಾಧ್ಯಕ್ಷರಾಗಿ ಲೋಹಿತಾಕ್ಷನ್ ಗಂಗೋತ್ರಿ ಅರಮಂಗಾನಂ, ಸಿ.ಕೆ.ಶ್ರೀಧರನ್ ಕೂವತೊಟ್ಟಿ, ಪ್ರ.ಕಾರ್ಯದರ್ಶಿಯಾಗಿ ಎಚ್.ದಿವಾಕರ ಅರಮಂಗಾನಂ, ಕಾರ್ಯದರ್ಶಿಗಳಾಗಿ ಕುಮಾರನ್ ಉಲೂಜಿ, ಪಿ.ವಿ.ಮೋಹನಕುಮಾರ್ ಕೂವತೊಟ್ಟಿ, ಕೋಶಾಧಿಕಾರಿಯಾಗಿ ಸಿ ಕುಂಞÂರಾಮನ್ ಉಲೂಜಿ ಹಾಗೂ ಮಾತೃ ಸಮಿತಿಯ ಅಧ್ಯಕ್ಷೆಯಾಗಿ ಯಮುನಾ ಪ್ರಭಾಕರ, ಉಪಾಧ್ಯಕ್ಷೆಯಾಗಿ ವೀಣಾರಾಣಿ ಶಂಕರ, ಶೋಭನಾ ಶ್ರೀಧರನ್ ಕುನ್ನುಮ್ಮೆಲ್, ಕಾರ್ಯದರ್ಶಿಯಾಗಿ ಉಷಾ ಕುಂಞÂತೀಯನ್, ಜೊತೆ ಕಾರ್ಯದರ್ಶಿಯಾಗಿ ಸುಕನ್ಯಾ ಕಮಲಾಕ್ಷನ್, ಪುಷ್ಪಾ ಕಮಲಾಕ್ಷ, ಕೋಶಾಧಿಕಾರಿಯಾಗಿ ಲಕ್ಷ್ಮಿ ಉಲೂಜಿ ಅವರನ್ನು ಆಯ್ಕೆಮಾಡಲಾಯಿತು.




.jpg)
