ಕುಂಬಳೆ: ಪುತ್ತಿಗೆ ಗ್ರಾ.ಪಂ. ಕಟ್ಟತ್ತಡ್ಕ ಎಸ್.ಸಿ.ಉನ್ನತಿ(ಕಾಲನಿ)ಯ ನಿವಾಸಿ ಕಮಲಾ ಅವರ ಮನೆ ನಿನ್ನೆ ಬೆಳಗಿನ ಜಾವ 2 ಗಂಟೆಗೆ ಪ್ರಬಲ ಗಾಳಿ ಮತ್ತು ಮಳೆಗೆ ಕುಸಿದಿದೆ. ಹಾಸಿಗೆ ಹಿಡಿದಿರುವ ಕಮಲಾ ಮತ್ತು ಅವರ ಅನಾರೋಗ್ಯ ಪೀಡಿತ ಪುತ್ರನನ್ನು ಕೆಲವು ದಿನಗಳ ಹಿಂದೆ ಬಾಡಿಗೆ ಮನೆಗೆ ಸ್ಥಳಾಂತರಿಸುವ ಮೂಲಕ ದೊಡ್ಡ ದುರಂತವೊಂದು ತಪ್ಪಿದೆ.
ಘಟನೆ ನಡೆದ ಸ್ಥಳಕ್ಕೆ ಗ್ರಾ.ಪಂ.ಅಧಿಕೃತರು, ಗ್ರಾಮಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿರುವರು.






