ಪೆರ್ಲ: ಪಡ್ರೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಉತ್ತಮ ಆರೋಗ್ಯ ಹಾಗೂ ಆಹಾರ ಅಭ್ಯಾಸಗಳು ವಿಷಯದ ಕುರಿತು ತರಗತಿ ಆಯೋಜಿಸಲಾಯಿತು. ಪೆರ್ಲ ಎಫ್.ಎಚ್.ಸಿ. ಯ ಕಿರಿಯ ಆರೋಗ್ಯ ಪರಿವೀಕ್ಷಕ ಹರೀಶ್ ಎಂ.ಎಸ್.ತರಗತಿ ನೀಡಿದರು. ಮುಖ್ಯ ಶಿಕ್ಷಕ ವಾಸುದೇವ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲೆಯ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕ-ಸಿಬ್ಬಂದಿ ಭಾಗವಹಿಸಿ ಮಾಹಿತಿ ಪಡೆದರು. ಹಿರಿಯ ಶಿಕ್ಷಕಿ ಸರಸ್ವತಿ ಕೆ.ಎನ್. ಸ್ವಾಗತಿಸಿ, ಶಿಕ್ಷಕ ಗೋಪಾಲ ಪಿ.ಕೆ.ವಂದಿಸಿದರು.
.




.jpg)
