ಕಾಸರಗೋಡು: ದೀರ್ಘಕಾಲದ ಸೇವೆಯ ನಂತರ ಸೇವೆಯಿಂದ ನಿವೃತ್ತರಾದ ಚೆಂಗಳ ಸೇವಾ ಸಹಕಾರಿ ಬ್ಯಾಂಕಿನ ಕಾರ್ಯದರ್ಶಿ ಪಿ.ಗಿರಿಧರನ್ ಅವರಿಗೆ ಆಡಳಿತ ಮಂಡಳಿ ಮತ್ತು ನೌಕರರ ವತಿಯಿಮದ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಸಂಸದ ರಾಜ್ ಮೋಹನ್ ಉನ್ಣಿತ್ತಾನ್ ಸಮಾರಂಭ ಉದ್ಘಾಟಿಸಿದರು ಬ್ಯಾಂಕ್ ಅಧ್ಯಕ್ಷ ಕುಞುಕೃಷ್ಣನ್ ನಾಯರ್ ಕಾಟ್ಟುಕೊಚ್ಚಿ ಅಧ್ಯಕ್ಷತೆ ವಹಿಸಿದ್ದರು.ಕೆಪಿಸಿಸಿ ಕಾರ್ಯದರ್ಶಿ ಕೆ. ನೀಲಕಂಠನ್, ಸಹಕಾರಿ ಸಂಘದ ಮಾಜಿ ಹೆಚ್ಚುವರಿ ನಿಬಂಧಕ ವಿ. ಕುಞÂಕಣ್ಣನ್, ಸಹಕಾರಿ ಸಂಘದ ಸಹಾಯಕ ನಿರ್ದೇಶಕ ಜೆ. ಅಶೋಕ್ ಶೆಣೈ, ಕೇರಳ ಸಹಕಾರಿ ನೌಕರರ ರಂಗದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಪಿ.ಕೆ. ವಿನೋದ್ ಕುಮಾರ್, ಮುಸ್ಲಿಂ ಲೀಗ್ ಜಿಲ್ಲಾ ಮಾಜಿ ಕಾರ್ಯದರ್ಶಿ ಮೂಸಾ ಬಿ. ಚೆರ್ಕಳ, ಸಿಪಿಎಂ ಚೆಂಗಳ ಸ್ಥಳೀಯ ಕಾರ್ಯದರ್ಶಿ ಕೆ.ವಿ. ಬಾಲರಾಜ್, ಬ್ಯಾಂಕ್ ಉಪಾಧ್ಯಕ್ಷ ಅಹಮದ್ ಕಬೀರ್, ಇಕ್ಬಾಲ್ ಚೇರೂರ್, ಸಿ.ಎಚ್.ವಿಜಯನ್ ಬಿ.ಕೆ.ಕುಟ್ಟಿ, ಬಿ.ವಿಷ್ಣು ಕಕ್ಕಿಲಾಯ, ಎಂ.ಭವಾನಿ, ಕೆ.ಕನಕಂ, ಪಿ.ಗಿರಿಧರನ್ ಉಪಸ್ಥಿತರಿದ್ದರು. ಈ ಸಂದರ್ಭ ಏರ್ ಇಂಡಿಯಾ ಇಂಟನ್ರ್ಯಾಷನಲ್ ಪೈಲಟ್ ಆಗಿ ಸೇರ್ಪಡೆಯಾದ ಪಿ. ಗಿರಿಧರನ್ ಅವರ ಪುತ್ರ ಪಿ. ಸಿದ್ಧಾರ್ಥ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.





