ಮಧೂರು : ಮಧೂರು ಸನಿಹದ ಪಟ್ಲದ ಚೇನಕ್ಕೋಡು ಬಳಿ ಊರಕೋಳಿ ಸಾಕಣೆ ಫಾರ್ಮ್‍ಗೆ ಬೀದಿನಾಯಿಗಳು ದಾಳಿ ನಡೆಸಿ ಐವತ್ತಷ್ಟು ಕೋಳಿಗಳನ್ನು ಕಚ್ಚಿ ಕೊಂದುಹಾಕಿದೆ. ನಾಲ್ಕರಿಂದ ಐದು ಸಾವಿರ ರೂ. ಬೆಲೆಬಾಳುವ ದೊಡ್ಡ ಹುಂಜಗಳೂ ಇದರಲ್ಲಿ ಒಳಗೊಂಡಿತ್ತು. ಕೆಲವು ಕೋಳಿಗಳು ಅರ್ಧ ತಿಂದುಹಾಕಿದ ಸ್ಥಿತಿಯಲ್ಲಿತ್ತು.
ಮಧೂರು ಕಲ್ಲಕಟ್ಟ ನಿವಾಸಿ ಸಪ್ವಾನ್ ಎಂಬವರ ಕೋಳಿ ಫಾರ್ಮ್ ಇದಾಗಿದೆ. ಗುರುವಾರ ರಾತ್ರಿ ಕೋಳಿಗಳಿಗೆ ಆಹಾರ ನೀಡಿ ಮಲಗಿದ್ದ ಸಫ್ವಾನ್ ಅವರಿಗೆ ಬೆಳಗ್ಗೆ ಕೋಳಿಗಳ ಚೀರಾಟದ ಶಬ್ದ ಕೇಳಿ ಹೊರಬಂದಾಗ ಕೋಳಿ ಗೂಡಿನ ಬಾಗಿಲನ್ನು ಸರಿಸಿ ಹಲವು ಬೀದಿನಾಯಿಗಳು ಕೋಳಿಗಳ ಮೇಲೆ ದಾಳಿ ನಡೆಸುತ್ತಿತ್ತು. ತಕ್ಷಣ ನಾಯಿಗಳನ್ನು ಓಡಿಸಿದ ಹಿನ್ನೆಲೆಯಲ್ಲಿ ಮತ್ತಷ್ಟು ಕೋಳಿಗಳು ಸಾವಿನಿಂದ ಪಾರಾಗಿತ್ತು. ಐವತ್ತು ಸಾವಿರ ರೂ.ಗೂ ಹೆಚ್ಚಿನ ನಷ್ಟ ಉಂಟಾಗಿರುವುದಾಗಿ ಸಂಶಯಿಸಲಾಗಿದೆ.




