ಕುಂಬಳೆ: ಬಸ್ಸಿನಲ್ಲಿ ಬಿದ್ದು ಸಿಕ್ಕಿದ 12ಸಾವಿರ ರೂ. ನಗದು ಹೊಂದಿದ ಪರ್ಸ್ ವಾರಸುದಾರರಿಗೆ ವಾಪಾಸುಮಾಡುವ ಮೂಲಕ ಬಸ್ ಸಿಬ್ಬಂದಿ ಪ್ರಮಾಣಿಕತೆ ಮೆರೆದಿದ್ದಾರೆ. ನಾಯ್ಕಾಪಿನಲ್ಲಿ ವಾಸಿಸುತ್ತಿರುವ ತಮಿಳ್ನಾಡು ಮೂಲದ ಮಹಿಳೆ ಗುರುವಾರ ಸಂಜೆ ಕುಂಬಳೆ-ಧರ್ಮತ್ತಡ್ಕ ರೂಟಲ್ಲಿ ಸಂಚರಿಸುವ ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸಿದ್ದು, ಬಸ್ಸಿಳಿದು ಮನೆಗೆ ತೆರಳಿದಾಗ ಪರ್ಸ್ ಬಿದ್ದಿರುವುದು ಗಮನಕ್ಕೆ ಬಂದಿತ್ತು. ಈ ಮಧ್ಯೆ ಬಸ್ ಧರ್ಮತ್ತಡ್ಕ ತಲುಪಿ ಸಿಬ್ಬಂದಿ ತಪಾಸಣೆ ನಡೆಸಿದಾಗ ಪರ್ಸ್ ಲಭಿಸಿತ್ತು. ಈ ಬಗ್ಗೆ ವಾಟ್ಸಪ್ ಮೂಲಕ ಸಂದೇಶ ನೀಡಿ ಪರ್ಸ್ ಬಿದ್ದುಸಿಕ್ಕಿರುವ ಬಗ್ಗೆ ಮಾಹಿತಿ ನೀಡಲಾಗಿತ್ತು. ಮಹಿಳೆ ಶುಕ್ರವಾರ ಬೆಳಗ್ಗೆ ಕುಂಬಳೆ ಪೇಟೆಗೆ ತೆರಳಿ ಚಾಲಕ ಅಂಗಡಿಮೊಗರು ನಿವಾಸಿ ಅಶ್ರಫ್ ಹಾಗೂ ಚಾಲಕ ಸತೀಶ್ ರೈ ಅವರಿಂದ ತನ್ನ ಪರ್ಸಿನ ಗುರುತು ಹೇಳಿ ಪಡೆದುಕೊಂಡಿದ್ದಾರೆ.




