ಕೊಲಂಬೊ: ಶ್ರೀಲಂಕಾ ಸಂಸತ್ತು ನಟ ಮೋಹನ್ ಲಾಲ್ ಅವರಿಗೆ ಗೌರವ ಅಭಿನಂದನೆ ಸಲ್ಲಿಸಿದೆ. ಉಪಸಭಾಪತಿ ಡಾ. ರಿಜ್ವಿ ಸಾಲಿಹ್ ಅವರ ಆಹ್ವಾನದ ಮೇರೆಗೆ ಮೋಹನ್ ಲಾಲ್ ಸಂಸತ್ತಿಗೆ ನಿನ್ನೆ ಆಗಮಿಸಿದ್ದರು.
ಮಹೇಶ್ ನಾರಾಯಣ್ ನಿರ್ದೇಶನದ ಹೊಸ ಚಿತ್ರದ ಚಿತ್ರೀಕರಣಕ್ಕಾಗಿ ಶ್ರೀಲಂಕಾದಲ್ಲಿರುವ ನಟ, ಶ್ರೀಲಂಕಾ ಸಂಸತ್ತು ತಮಗೆ ನೀಡಿದ ಗೌರವಕ್ಕೆ ಕೃತಜ್ಞತೆ ಸಲ್ಲಿಸಿದರು.
ಸಂಸತ್ ಅಧಿವೇಶನ ನಡೆಯುತ್ತಿರುವಾಗ ಸದನದಲ್ಲಿ ಮೋಹನ್ ಲಾಲ್ ಅವರನ್ನು ಸನ್ಮಾನಿಸಲಾಯಿತು. ತಮಗೆ ದೊರೆತ ಆತ್ಮೀಯ ಸ್ವಾಗತದ ಬಗ್ಗೆ ಮೋಹನ್ ಲಾಲ್ ತುಂಬಾ ಹೆಮ್ಮೆಪಡುವುದಾಗಿ ಹೇಳಿದರು.
ಪ್ರಧಾನಿ ಡಾ. ಹರಿಣಿ ಅಮರಸೂರ್ಯ, ಸ್ಪೀಕರ್ ಡಾ. ಜಗತ್ ವಿಕ್ರಮರತ್ನೆ, ಉಪಸಭಾಪತಿ ಡಾ. ರಿಜ್ವಿ ಸಾಲಿಹ್ ಮತ್ತು ಆತ್ಮೀಯ ಸ್ನೇಹಿತ ಇಶಾಂತ ರತ್ನಾಯಕೆ ಅವರನ್ನು ಭೇಟಿಯಾಗಿರುವುಉದ ನಿಜವಾದ ಸೌಭಾಗ್ಯ ಎಂದವರು ತಿಳಿಸಿದರು.
ಈ ಶ್ರೀಲಂಕಾ ಭೇಟಿಯನ್ನು ಅವಿಸ್ಮರಣೀಯವಾಗಿಸಿದ್ದಕ್ಕಾಗಿ ತಮಗೆ ತುಂಬಾ ಕೃತಾರ್ಥತೆ ಇದೆ ಎಂದು ಮೋಹನ್ ಲಾಲ್ ಉಲ್ಲೇಖಿಸಿದ್ದಾರೆ. ಅವರು ಭೇಟಿಯ ಚಿತ್ರಗಳನ್ನು ಸಹ ಫೇಸ್ ಬುಕ್ ಪೋಸ್ಟ್ ಮಾಡಿದ್ದಾರೆ.





