HEALTH TIPS

ದೇಶದ ಇತಿಹಾಸದಲ್ಲೇ 'ಅತ್ಯಂತ ವಿಶ್ವಾಸಾರ್ಹ' ಚುನಾವಣೆ ನಡೆಯಲಿದೆ: ಬಾಂಗ್ಲಾ

ಢಾಕಾ: ಮುಂದಿನ ಸಾರ್ವತ್ರಿಕ ಚುನಾವಣೆಯು ಬಾಂಗ್ಲಾದೇಶದ ಇತಿಹಾಸದಲ್ಲೇ ಅತ್ಯಂತ ವಿಶ್ವಾಸಾರ್ಹ ಮತ್ತು ಶಾಂತಿಯುತ ಚುನಾವಣೆ ಎನಿಸಿಕೊಳ್ಳಲಿದೆ ಎಂದು ಬಾಂಗ್ಲಾ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮೊಹಮ್ಮದ್‌ ಯೂನಸ್‌ ಅವರ ಕಾರ್ಯದರ್ಶಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಖಲ್ನಾದಲ್ಲಿ ಮಾಧ್ಯಮದವರೊಂದಿಗೆ ನಡೆದ ಸಂವಾದದ ವೇಳೆ ಯೂನಸ್‌ ಅವರ ಮಾಧ್ಯಮ ಕಾರ್ಯದರ್ಶೀ ಶಫೀಕುಲ್‌ ಅಲಮ್‌ ಅವರು ಈ ಮಾತನ್ನು ಹೇಳಿದ್ದಾರೆ ಎಂದು ಸರ್ಕಾರಿ ಸ್ವಾಮ್ಯದ ಸುದ್ದಿಸಂಸ್ಥೆ 'ಬಿಎಸ್‌ಎಸ್‌' ವರದಿ ಮಾಡಿದೆ.

ಬಾಂಗ್ಲಾ ಸಾರ್ವತ್ರಿಕ ಚುನಾವಣೆಯು 2026ರ ಏಪ್ರಿಲ್‌ನಲ್ಲಿ ನಡೆಯಲಿದೆ ಎಂದು ಯೂನಸ್‌ ಕಳೆದ ತಿಂಗಳು ಘೋಷಿಸಿದ್ದರು.

'ಚುನಾವಣೆಯು ಹಬ್ಬದಂತಹ ಮತ್ತು ಶಾಂತಿಯುತ ವಾತಾವರಣದಲ್ಲಿ ನಡೆಯಲಿದೆ' ಎಂದು ಭರವಸೆ ನೀಡಿರುವ ಅಲಮ್‌, 'ಮುಂಬರುವ ರಾಷ್ಟ್ರೀಯ ಚುನಾವಣೆಯು ದೇಶದ ಇತಿಹಾಸದಲ್ಲೇ ಅತ್ಯಂತ ವಿಶ್ವಾಸಾರ್ಹ ಮತ್ತು ಶಾಂತಿಯುತ ಚುನಾವಣೆಯಾಗಲಿದೆ' ಎಂದಿದ್ದಾರೆ.

ಕಳೆದ ವರ್ಷ ಜುಲೈನಲ್ಲಿ ಆರಂಭವಾದ ಬೃಹತ್‌ ಪ್ರತಿಭಟನೆಯ ಪ್ರಾಥಮಿಕ ಉದ್ದೇಶ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಪುನಃಸ್ಥಾಪಿಸಬೇಕು ಎಂಬುದಾಗಿತ್ತು. ಅದರಂತೆ, ಮುಕ್ತ ಹಾಗೂ ಪಾರದರ್ಶಕ ಚುನಾವಣೆಯನ್ನು ನಡೆಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನೂ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಪ್ರತಿಭಟನೆ ದೇಶದಾದ್ಯಂತ ತೀವ್ರಗೊಳ್ಳುತ್ತಿದ್ದಂತೆ 2024ರ ಆಗಸ್ಟ್‌ 5ರಂದು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಶೇಖ್‌ ಹಸೀನಾ, ದೇಶದಿಂದ ಪಲಾಯನ ಮಾಡಿದ್ದರು.

2014, 2018 ಹಾಗೂ 2024ರ ಸಾರ್ವತ್ರಿಕ ಚುನಾವಣೆಗಳಲ್ಲಿ ನಡೆದಿವೆ ಎನ್ನಲಾದ ಅಕ್ರಮಗಳ ಕುರಿತು ಸಮಗ್ರ ತನಿಖೆ ನಡೆಸಲು ಮಧ್ಯಂತರ ಸರ್ಕಾರವು ಕಳೆದವಾರ ಸಮಿತಿ ರಚಿಸಿದೆ.

ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶಮಿಮ್‌ ಹಸ್ನೈನ್‌ ನೇತೃತ್ವದ ಐವರು ಸದಸ್ಯರ ಸಮಿತಿಯು ಇದೇ ವರ್ಷ ಸೆಪ್ಟೆಂಬರ್‌ 30ರೊಳಗೆ ವರದಿ ಸಲ್ಲಿಸಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries