ಕಾಸರಗೋಡು: ಕಾಞಂಗಾಡು ತುರುತ್ತಿ ವಾಯವಳಪ್ಪಿಲ್ ನಿವಾಸಿ ಕೃಷ್ಣನ್ ಎಂಬವರ ಪುತ್ರಿ, ಚೆರ್ವತ್ತೂರಿನ ಶಾಲೆಯೊಂದರ ಅಧ್ಯಾಪಿಕೆ ಕೀರ್ತನಾ(25)ಎಂಬವರ ಮೃತದೇಹ ನೀಲೇಶ್ವರ ಶ್ರೀ ಸುಬ್ರಹ್ಮಣ್ಯೇಶ್ವರ ಕ್ಷೇತ್ರ ಸನಿಹದ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ. ಭಾನುವಾರ ಬೆಳಗ್ಗೆ ಮಲಬಾರ್ ಎಕ್ಸ್‍ಪ್ರೆಸ್ ರೈಲು ಹಾದುಹೋಗುತ್ತಿದ್ದಂತೆ ಯುವತಿಯೊಬ್ಬಳು ರೈಲಿನಡಿ ಹಾರಿದ್ದು, ಸ್ಥಳದಲ್ಲಿದ್ದವರೊಬ್ಬರು ರಕ್ಷಣೆಗೆ ಧಾವಿಸಿದರೂ, ಯಶಸ್ವಿಯಾಗಿರಲಿಲ್ಲ.
ಮೃತದೇಹ ಛಿದ್ರಗೊಂಡ ಸ್ಥಿತಿಯಲ್ಲಿದ್ದು, ಮಧ್ಯಾಹ್ನದ ವರೆಗೂ ಗುರುತು ಪತ್ತೆ ಸಾಧ್ಯವಾಗಿರಲಿಲ್ಲ. ನಂತರ ಯುವತಿ ಮನೆಯವರು ಆಗಮಿಸಿ ಗುರುತುಪತ್ತೆಹಚ್ಚಿದ್ದರು. ಯುವತಿ ರೈಲಿನಡಿ ಹಾರಿ ಆತ್ಮಹತ್ಯೆಗೈದಿರುವ ಬಗ್ಗೆ ನೀಲೇಶ್ವರ ಠಾಣೆ ಪೊಲೀಸರು ಕೇಸು ದಾಕಲಿಸಿಕೊಂಡಿದ್ದಾರೆ.




.webp)
