ಮಂಜೇಶ್ವರ: ಶ್ರೀ ವಿಷ್ಣು ಯಕ್ಷಬಳಗ ಮಜಿಬೈಲು ತಂಡವು ಯಶಸ್ವಿಯಾಗಿ ನೂರು ತಾಳಮದ್ಧಳೆಯನ್ನು ಪ್ರಸ್ತುತಿಗೊಳಿಸಿದ ಸಂಭ್ರಮದಲ್ಲಿ ಯಕ್ಷಶತಕ ಕಾರ್ಯಕ್ರಮವನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿ ಸಹಯೋಗದೊಂದಿಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಚಿಗುರುಪಾದೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿತ್ತು. ಈ ಸಂದರ್ಭ ಸಂಗೀತ ಗುರುಗಳಾದ ವಿದುಷಿ ಶಿಲ್ಪಾ ಭಟ್, ಯಕ್ಷಗಾನ ಹಿಮ್ಮೇಳ ಗುರು ಶೇಣಿ ಸುಬ್ರಹ್ಮಣ್ಯ ಭಟ್ ಉಳುವಾನ, ಯಕ್ಷಗಾನ ಕ್ಷೇತ್ರದ ಹವ್ಯಾಸಿ ಹಿರಿಯ ಸಾಧಕ ಮಾಧವ ನಾವಡ ವರ್ಕಾಡಿ, ಗೋಪಾಲಕೃಷ್ಣ ನಾಯಕ್ ಸೂರಂಬೈಲ್ ಅವರನ್ನು ಗಣ್ಯರ ಸಮಕ್ಷಮ ಸನ್ಮಾನಿಸಿ ಗೌರವಿಸಲಾಯಿತು.
ಶ್ರೀ ವಿಷ್ಣು ಯಕ್ಷಬಳಗ ಮಜಿಬೈಲು ತಂಡದ ಅಧ್ಯಕ್ಷ ಹರೀಶ ನಾವಡ ಮಜಿಬೈಲು ಅವರಿಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಚಿಗುರುಪಾದೆ ವತಿಯಿಂದ ಗೌರವಿಸಿ ಅಭಿನಂದಿಸಲಾಯಿತು.



