ಪೆರ್ಲ: ಮಣಿಯಂಪಾರೆ ಶ್ರೀದುರ್ಗಾಪರಮೇಶ್ವರಿ ಭಜನಾ ಮಂದಿರದ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ನಿಕಟಪೂರ್ವ ಅಧ್ಯಕ್ಷ ಬಾಲಕೃಷ್ಣ ನಾಯ್ಕ ಅರೆಮಂಗಿಲ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವರ್ಷಗತ ವರದಿ ಹಾಗೂ ಲೆಕ್ಕಪತ್ರ ಮಂಡಿಸಲಾಯಿತು. ನೂತನ ಸಮಿತಿ ಪದಾಧಿಕಾರಿಗಳಾಗಿ ಆನಂದ ನಾಯ್ಕ ಅರೆಮಂಗಿಲ (ಅಧ್ಯಕ್ಷ), ಉಮೇಶ್ ಎಂ, ವಿಜಯ ಮಣಿಯಂಪಾರೆ (ಉಪಾಧ್ಯಕ್ಷರು), ವಸಂತ ಎನ್ ಪ್ರಧಾನ (ಕಾರ್ಯದರ್ಶಿ), ರವಿ ಆಳ್ಚಾರ್, ಜಯಾನಂದ.ಎ (ಎಔತೆ ಕಾರ್ಯದರ್ಶಿ), ಪ್ರಶಾಂತ್ ಎನ್ (ಕೋಶಾಧಿಕಾರಿ), ನೇಮಿರಾಜ್ ಎ ಲೆಕ್ಕಪರಿಶೋಧಕರಾಗಿ ಆಯ್ಕೆಯಾಗಿದ್ದಾರೆ.


