ಸಮರಸ ಚಿತ್ರಸುದ್ದಿ: ಮಧೂರು : ಮಧೂರು ಗ್ರಾಮ ಪಂಚಾಯತಿ ಪರಕ್ಕಿಲ ಅಂಗನವಾಡಿಯಲ್ಲಿ ಮುದ್ದು ಮಕ್ಕಳ ಪ್ರವೇಶೋತ್ಸವ ಇತ್ತೀಚೆಗೆ ನಡೆಯಿತು. ಗ್ರಾಮ ಪಂಚಾಯತಿ ಸದಸ್ಯ ಬಶೀರ್ ಪುಳ್ಕೂರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉಳಿಯ ತರುಣ ಕಲಾ ವೃಂದದ ಹಿರಿಯ ಸದಸ್ಯ ಬಾಲಕೃಷ್ಣ ಯು. ಅಧ್ಯಕ್ಷತೆ ವಹಿಸಿದ್ದರು. ಅಂಗನವಾಡಿಯ ನಿವೃತ್ತ ಅಧ್ಯಾಪಕಿ ಸುಜಾತ ಸ್ವಾಗತಿಸಿ, ಅಧ್ಯಾಪಕಿ ವಿಮಲ ಯು. ನಿರೂಪಿಸಿದರು. ಸಹಾಯಕಿ ಆನಂದಿ ವಂದಿಸಿದರು. ಮಕ್ಕಳ ರಕ್ಷಕರು ಉಪಸ್ಥಿತರಿದ್ದರು. ಸಿಹಿತಿಂಡಿ ಹಂಚಲಾಯಿತು.

.jpg)
