ಬದಿಯಡ್ಕ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಗುರುವಾರ ಬೆಳಿಗ್ಗೆ ಕುಂಟಿಕಾನ ಮಠ ಶ್ರೀ. ಶಂಕರನಾರಾಯಣ ದೇವಸ್ಥಾನದಲ್ಲಿ ಪರಿಸರ ಶುಚೀಕರಣ ಹಾಗೂ ಗಿಡನೆಡುವ ಸಮಾರಂಭ ನಡೆಯಿತು.
ರಾಘವ ಭಂಡಾರಿ ಮಾಡತ್ತಡ್ಕ ನೇತೃತ್ವ ವಹಿಸಿದ್ದರು. ಭುವನ ಚೇತನಡ್ಕ, ಶೋಭಾ, ಗೀತಾ, ವೀಣಾ, ಶಶಿಕಲಾ ಹಾಗೂ ಸುಶಾಂತ್ ಕುಂಟಿಕಾನ, ಗಣೇಶ್
ಭಟ್ ಕುಂಟಿಕಾನ ಶ್ರದ್ದಾ ಭಕ್ತಿಯಿಂದ ಸಹಕರಿಸಿದರು. ದೇವಸ್ಥಾನದ ವತಿಯಿಂದ ಸಮಯೋಚಿತವಾಗಿ ಊಟೋಪಚಾರ ಶ್ರೀ ದೇವರ ಪ್ರಸಾದ ನೀಡಿ ಎಲ್ಲಾ ಕಾರ್ಯಕರ್ತರನ್ನು ಅಭಿನಂದಿಸಲಾಯಿತು.

.jpg)

