ಕಾಸರಗೋಡು: ನ್ಯಾಷನಲ್ ವಿಶ್ವಕರ್ಮ ಫೆಡರೇಷನ್ (ಎನ್‍ವಿಎಫ್) ರಾಷ್ಟ್ರೀಯಕಾರ್ಯಕಾರಿ ಸಭೆ ಕಾಸರಗೋಡಿನ ಪ್ರಧಾನ ಕಚೇರಿಯಲ್ಲಿ ನೆರವೇರಿತು. ರಾಷ್ಟ್ರೀಯ ಸಭೆಯಲ್ಲಿ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಸೀತಾರಾಮ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಜಾತಿ ಸೆನ್ಸಸ್ ಜಾರಿಗೆ ತರಲು ಸರ್ಕಾರ ಮುಮದಗಬೇಕು ಎಂದು ನಿರ್ಣಯದ ಮೂಲಕ ಒತ್ತಾಯಿಸಲಾಯಿತು.
ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷರಾದ ಶಶಿ ಪಗರ, ಉಪಾಧ್ಯಕ್ಷರಾದ ರಾಘವನ್ ದೊಡ್ಡುವಯಲ್, ರಾಜ್ಯಾಧ್ಯಕ್ಷರಾದ ಅಂಬಿ ಸಿ.ಕೆ. ರಾಜ್ಯ ಕಾರ್ಯದರ್ಶಿ ಗೋಪಾಲಕೃಷ್ಣನ್ ಸಿ.ವಿ. ತೃಶ್ಶೂರು, ರಾಜ್ಯ ಕಾರ್ಯಕಾರಿ ಸಮಿತಿ ಅಧ್ಯಕ್ಷೆ ವಾಸಂತಿ ಜೆ. ಆಚಾರ್ಯ, ವಿಷ್ಣು ಆಚಾರ್ಯ, ಗೀತ ಕೆ.ಎಂ. ತೃಶ್ಶೂರು ಮೊದಲದವರು ಉಪಸ್ಥಿತರಿದ್ದರು. ಎನ್‍ವಿಎಫ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂಘಟನಾ ವರದಿ ಮಂಡಿಸಿದರು.


