ಕಾಸರಗೋಡು: ನೀರಿನ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದ ಕಾಸರಗೋಡಿನ ಕೂಡ್ಲು ಗಂಗೆ ರಸ್ತೆ ನಿವಾಸಿ ಗಣೇಶ್ ನಾಯ್ಕ್ ಅವರ ಪತ್ನಿ ಭವಾನಿ(65)ಅವರ ಮೃತದೇಹ ಮಂಗಳವಾರ ಬೆಳಗ್ಗೆ ತೋಡಿನಲ್ಲಿ ಪತ್ತೆಯಾಗಿದೆ. ಭವಾನಿ ಅವರು ಸೋಮವಾರ ಬೆಳಗ್ಗೆ 11ಕ್ಕೆ ಅಡಕೆ ತೋಟಕ್ಕೆ ತೆರಳಿದ್ದ ಸಂದರ್ಭ ಸನಿಹದ ತೋಡಿಗೆ ಆಯ ತಪ್ಪಿಬಿದ್ದು ನೀರುಪಾಲಾಗಿದ್ದರು. ಅಗ್ನಿಶಾಮಕದಳ, ಪೊಲೀಸ್ ಹಗೂ ಸ್ಥಳೀಯರು ಹುಡುಕಾಟ ನಡೆಸಿದರೂ, ಪ್ರಯೋಜನವಾಗಿರಲಿಲ್ಲ. ಮಂಗಳವಾರ ಬೆಳಗ್ಗೆ ಹುಡುಕಾಟ ಮುಂದುವರಿಸಿದಾಗ ತೋಡಿನಿಂದ ಅಲ್ಪ ದೂರದ ಕುರುಚಲು ಬಳ್ಳಿಯಲ್ಲಿ ಸಿಲುಕಿಕೊಂಡಿದ್ದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.


