ವಾಷಿಂಗ್ಟನ್: ಅಮೆರಿಕಾದಾದ್ಯಂತ ಸಾಲ್ಮೊನೆಲ್ಲಾ ಸೋಂಕಿನ ಪ್ರಕರಣ ಹೆಚ್ಚಿದ್ದು ಇದುವರೆಗೆ 79 ಪ್ರಕರಣ ವರದಿಯಾಗಿದ್ದು 21 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಆಹಾರ ಸುರಕ್ಷತೆ ಹಾಗೂ ಸಾರ್ವಜನಿಕ ಆರೋಗ್ಯದ ಕಾಳಜಿಯ ಕಾರಣಕ್ಕೆ 1.7 ದಶಲಕ್ಷ ಕೋಳಿಮೊಟ್ಟೆಗಳನ್ನು ಮಾರುಕಟ್ಟೆಯಿಂದ ವಾಪಾಸು ಪಡೆದಿರುವುದಾಗಿ ವರದಿಯಾಗಿದೆ.
ಅತಿಸಾರ, ಜ್ವರ ಮತ್ತು ಕಿಬ್ಬೊಟ್ಟೆಯ ಸೆಳೆತ ಆಹಾರದಿಂದ ಹರಡುವ ಸಾಲ್ಮೊನೆಲ್ಲಾ ಕಾಯಿಲೆಯ ಲಕ್ಷಣಗಳಾಗಿವೆ.




