ಮವೂ : ದ್ವೇಷ ಭಾಷಣ ಮಾಡಿದ ಪ್ರಕರಣದಲ್ಲಿ ಉತ್ತರ ಪ್ರದೇಶದ ಶಾಸಕ ಅಬ್ಬಾಸ್ ಅನ್ಸಾರಿ ಅವರಿಗೆ ಕೋರ್ಟ್ ಎರಡು ವರ್ಷದ ಸಜೆ ವಿಧಿಸಿದೆ.
2022ರಲ್ಲಿ ಪ್ರಕರಣ ದಾಖಲಾಗಿತ್ತು. ಇವರು ಮಾಜಿ ಗ್ಯಾಂಗ್‌ಸ್ಟರ್ ಮತ್ತು ರಾಜಕಾರಣಿ ಮುಖ್ತಾರ್ ಅನ್ಸಾರಿ ಅವರ ಪುತ್ರ.
ಸಜೆ ವಿಧಿಸಿ ಕೋರ್ಟ್ ಆದೇಶಿಸಿರುವ ಹಿನ್ನೆಲೆಯಲ್ಲಿ ಇವರು ಶಾಸಕ ಸ್ಥಾನದಿಂದ ಅನರ್ಹಗೊಳ್ಳುವ ಸಾಧ್ಯತೆಗಳಿವೆ. ಮವೂ ಕ್ಷೇತ್ರದಿಂದ ಇವರು ಸುಹೇಲ್‌ದೇವ್ ಭಾರತೀಯ ಸಮಾಜಪಾರ್ಟಿ (ಎಸ್‌ಬಿಎಸ್‌ಪಿ) ಅಭ್ಯರ್ಥಿಯಾಗಿ ಜಯಗಳಿಸಿದ್ದಾರೆ.
ಚುನಾವಣೆ ವೇಳೆ ಪಹರ್‌ಪುರ್‌ನಲ್ಲಿ ಮಾಡಿದ್ದ ಪ್ರಚಾರ ಭಾಷಣದಲ್ಲಿ ಅವರು 'ಚುನಾವಣೆಯ ಬಳಿಕ ಲೆಕ್ಕಾಚಾರ ಚುಕ್ತಾ ಮಾಡ್ತೇನೆ' ಎಂದು ಮವೂ ಜಿಲ್ಲಾಡಳಿತಕ್ಕೆ ಬೆದರಿಕೆ ಹಾಕಿದ್ದರು. ಈ ಸಂಬಂಧ ದ್ವೇಷ ಭಾಷಣ ಪ್ರಕರಣ ದಾಖಲಾಗಿತ್ತು.




