ಭೋಪಾಲ್: ಬಂದೂಕಿನಿಂದ ಗುಂಡು ಹಾರಿಸಿದರೆ ಫಿರಂಗಿಯಿಂದ ಗುಂಡು ಹಾರಿಸಿ ಪ್ರತ್ಯುತ್ತರ ನೀಡಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದರು.
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತ್ಯುತ್ತರವಾಗಿ ಭಾರತವು 'ಸಿಂಧೂರ ಕಾರ್ಯಾಚರಣೆ' ನಡೆಸಿದ ಬಳಿಕ 'ಸಿಂಧೂರ'ವು ಶೌರ್ಯದ ಸಂಕೇತವಾಗಿ ಬದಲಾಗಿದೆ ಎಂದು ಮೋದಿ ಅವರು ಹೇಳಿದ್ದಾರೆ.
ಸಿಂಧೂರ ಕಾರ್ಯಾಚರಣೆಯು ದೇಶದ ಕಂಡ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳ ಪೈಕಿ ಅತ್ಯಂತ ಯಶಸ್ವಿಯಾದದ್ದು ಎಂದು ಪ್ರತಿಪಾದಿಸಿದರು.
'ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಭಾರತೀಯರ ರಕ್ತ ಹರಿಸಿದ್ದಷ್ಟೇ ಅಲ್ಲದೆ, ನಮ್ಮ ಸಂಸ್ಕೃತಿಯ ಮೇಲೆಯೂ ದಾಳಿ ಮಾಡಿದ್ದರು... ನಮ್ಮ ದೇಶದ ಮಹಿಳೆಯರ ಶಕ್ತಿಗೆ ಅವರು ಸವಾಲು ಹಾಕಿದ್ದರು' ಎಂದರು.




