ಕಾಸರಗೋಡು: ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕೆಡಿಪಿ ಯೋಜನೆಯನ್ವಯ ಮಂಜೂರಾಗಿರುವ ನೂತನ ಕಟ್ಟಡದ ಶಿಲಾನ್ಯಾಸವನ್ನು ಶಾಸಕ ಎನ್.ಎ ನೆಲ್ಲಿಕುನ್ನು ನೆರವೇರಿಸಿದರು. ಈ ಬಗ್ಗೆ ಶಾಲಾ ವಠಾರದಲ್ಲಿ ನಡೆದ ಸಮಾರಂಭದಲ್ಲಿ ಕಾಸರಗೋಡು ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ ಅಧ್ಯಕ್ಷತೆ ವಹಿಸಿದ್ದರು. ಲೋಕೋಪಯೋಗಿ ಇಲಾಖೆ ಕಟ್ಟಡ ವಿಭಾಗ ಸಹಾಯಕ ಅಭಿಯಂತೆ ಯಮುನಾ ಪಿ.ಎಂ ಯೋಜನಾ ವರದಿ ಮಂಡಿಸಿದರು. ನಗರಸಭಾ ಉಪಾಧ್ಯಕ್ಷೆ ಶಂಸಿದಾ ಫಿರೋಜ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ನಗರಸಭಾ ಸ್ಥಾಯೀ ಸಮಿತಿ ಅಧ್ಯಕ್ಷೆ ಕೆ. ರಜನಿ, ನಗರಸಭಾ ಸದಸ್ಯೆ ಶ್ರೀಲತಾ, ಜಿಲ್ಲಾ ಶಿಕ್ಷಣ ಉಪ ನಿರ್ದೇಶಕ ಮಧುಸೂಧನ್ ಟಿವಿ, ಕಾಸರಗೋಡು ಡಯೆಟ್ ಪ್ರಾಂಶುಪಾಲ ರಘುರಾಮ ಭಟ್, ವಿದ್ಯಾಕಿರಣ ಜಿಲ್ಲಾ ಸಮನ್ವಯಾಧಿಕಾರಿ ಟಿ. ಪ್ರಕಾಶನ್, ಡಿಪಿಸಿ ವಿ.ಎಸ್ ಬಿಜುರಾಜ್, ಕೈಟ್ ಕೋರ್ಡಿನೇಟರ್ ರೋಜಿ ಜೋಸೆಫ್, ಜಿಲ್ಲಾ ಶಿಕ್ಷಣಾಧಿಕಾರಿ ಆಗಸ್ಟಿನ್ ಬರ್ನಾರ್ಡ್, ಎಸ್.ಎಂ.ಸಿ ಅಧ್ಯಕ್ಷ ಲೈಜುಮೋನ್ ಕೆ.ಸಿ, ಎಂಪಿಟಿಎ ಅಧ್ಯಕ್ಷೆ ಅಶ್ವಿತಾ ಗೋಕುಲ್, ಸ್ಟಾಫ್ ಸೆಕ್ರೆಟರಿ ಶ್ರೀಕುಮಾರ್, ಸೀನಿಯರ್ ಅಸಿಸ್ಟೆಂಟ್ ಮೀನಾ ಕುಮಾರಿ ಎ.ಪಿ, ವಿದ್ಯಾರ್ಥಿ ಪ್ರತಿನಿಧಿ ಆದಿತ್ಯ ಕುಂಬಳೆ ಉಪಸ್ಥಿತರಿದ್ದರು. ಶಾಲಾ ಪಿಟಿಎ ಅಧ್ಯಕ್ಷ ರಶೀದ್ ಪೂರಣಂ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಭಾರತೀ ವಂದಿಸಿದರು.


