ಕಾಸರಗೋಡು: ಮತೀಯ ಸಾಮರಸ್ಯಕ್ಕೆ ಧಕ್ಕೆ ತರುವ ಹಾಗೂ ಕೋಮು ಗಲಬೆಗೆ ಪ್ರಚೋದನೆ ನೀಡುವ ನಿಟ್ಟಿನಲ್ಲಿ ಒಳಯಂ ಜುಮಾ ಮಸೀದಿ ಉರುಸ್ ಸಮಾರಂಭದ ಫ್ಲೆಕ್ಸ್ ಫಲಕ ಹರಿದು ಹಾಕಿದ ಘಟನೆಗೆ ಸಂಬಂಧಿಸಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಪಚ್ಚಂಬಳ ನಿವಾಸಿ ಫಯಾಸ್(19)ಹಾಗೂ ಅಡ್ಕ ವೀರ ನಗರದ ಅಬ್ದುಲ್ ಶಾರಿಕ್927) ಬಂಧಿತರು.
ಮೇ 1ರಂದು ರಾತ್ರಿ ಘಟನೆ ನಡೆದಿದ್ದು, ವಳಯಂ ಮಖಾಂ ಉರುಸ್ ಪ್ರಚಾರಾರ್ಥ ಅಡ್ಕ ವೀರನಗರದಲ್ಲಿ ಅಳವಡಿಸಲಾಗಿದ್ದ ಫ್ಲೆಕ್ಸ್ ಬೋರ್ಡನ್ನು ಕಿಡಿಗೇಡಿಗಳು ಹರಿದು ನಾಶಗೊಳಿಸಿರುವ ಬಗ್ಗೆ ಅಡ್ಕ ನಿವಾಸಿ ಅಬ್ದುಲ್ ಸತ್ತಾರ್ ನೀಡಿದ ದೂರಿನನ್ವಯ ಕುಂಬಳೆ ಠಾಣೆ ಪೆÇೀಲೀಸರು ಕೇಸು ದಾಖಲಿಸಿಕೊಂಡಿದ್ದರು.
ಇ ಸಂದರ್ಭ ಸ್ಥಳೀಯರು ನಡೆಸಿದ ವಿಚಾರಣೆಯಿಂದ ಫ್ಲೆಕ್ಸ್ ಬೋರ್ಡನ್ನು ಫಯಾಸ್ ಹರಿದು ಹಾಕಿರುವ ಬಗ್ಗೆ ಮಾಹಿತಿ ಲಭಿಸಿತ್ತು. ಈ ಮಧ್ಯೆ ಫಯಾಸ್ ಮುಂಬೈಗೆ ಪರಾರಿಯಾಗಿ ತಲೆಮರೆಸಿದ್ದನು. ಅಲ್ಲಿ ಆತನಿಗೆ ನಿಲ್ಲಲು ಅಬ್ದುಲ್ ಶಾರಿಕ್ ವ್ಯವಸ್ಥೆಮಾಡಿಕೊಟ್ಟಿದ್ದನು. ಮೇ 4ರಂದು ಇವರಿಬ್ಬರೂ ಊರಿಗೆ ವಾಪಸಾಗಿದ್ದು, ಈ ಸಂದರ್ಭ ಪೊಲೀಸರು ಕಾರ್ಯಾಚರಣೆ ನಡೆಸಿ ಫಯಾಸ್‍ನನ್ನು ಪಚ್ಚಂಬಳದಿಂದ ಬಂಧಿಸಿದ್ದಾರೆ. ಫ್ಲೆಕ್ಸ್ ಹರಿಯಲು ಅಬ್ದುಲ್ ಶಾರೀಕ್ ತನಗೆ ತಿಳಿಸಿರುವುದಾಗಿ ಫಯಾಸ್ ಪೊಲೀಸರಲ್ಲಿ ತಿಳಿಸಿದ ಹಿನ್ನೆಲೆಯಲ್ಲಿ ಶುಕ್ರವಾರ ವೀರನಗರದಿಂದ ಅಬ್ದುಲ್ ಶಾರಿಕ್‍ನನ್ನೂ ಬಂಧಿಸಲಾಗಿದೆ. ಫಯಾಸ್‍ಗೆ ತಲೆಮರೆಸಲು ಅಬ್ದುಲ್ ಶಾರಿಕ್ ಸಹಾಯ ಒದಗಿಸಿರುವುದಾಗಿ ಪೆÇೀಲೀಸರು ತಿಳಿಸಿದ್ದಾರೆ. ತನ್ನ ಊರಿನ ಉರುಸ್ ಸಮಾರಂಭದ ಫ್ಲೆಕ್ಸ್ ತಾನೇ ಹರಿದು, ಅನ್ಯಮತೀಯರ ಮೇಲೆ ಹೇರುವುದರ ಜತೆಗೆ ಪರಿಸರದಲ್ಲಿ ಕಲಹ ಸೃಷ್ಟಿಸಲು ಇವರು ಯತ್ನಿಸಿದ್ದರೆನ್ನಲಾಗಿದೆ.

