HEALTH TIPS

ಗಮನ ಸೆಳೆದ ಯೋಗ ನೃತ್ಯ ':ಕಾಲಡಿ ಸಂಸ್ಕøತ ವಿಶ್ವವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ

ಕಾಲಡಿ: ಶ್ರೀ ಶಂಕರಾಚಾರ್ಯ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ವಿಶ್ವವಿದ್ಯಾಲಯದ ಕಾಲಡಿ ಮುಖ್ಯ ಆವರಣದ ಮುಕ್ತ ಸಭಾಂಗಣದಲ್ಲಿ ರಾಷ್ಟ್ರೀಯ ಕೆಡೆಟ್ ಕಾಪ್ರ್ಸ್ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದೊಂದಿಗೆ ದೈಹಿಕ ಶಿಕ್ಷಣ ವಿಭಾಗವು ಆಯೋಜಿಸಿದ್ದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಸಿಂಡಿಕೇಟ್ ಸದಸ್ಯ ಡಾ. ವಿ. ಲಿಸಿ ಮ್ಯಾಥ್ಯೂ ಉದ್ಘಾಟಿಸಿದರು.

ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಡಾ. ಎಂ. ಆರ್. ದಿನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಫಿಟ್ನೆಸ್ ತಜ್ಞ ಜಾಬಿ ಮೈಕೆಲ್ ಮುಖ್ಯ ಭಾಷಣ ಮಾಡಿದರು. ದೈಹಿಕ ಶಿಕ್ಷಣ ವಿಭಾಗದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪ್ರದರ್ಶಿಸಿದ 'ಯೋಗ ನೃತ್ಯ' ವಿಭಿನ್ನವಾಗಿತ್ತು. ಯೋಗದ ಮಹತ್ವ ಮತ್ತು ಅಗತ್ಯವನ್ನು ಸಂಯೋಜಿಸುವ ಮೂಲಕ ಜಾಗೃತಿ ಮೂಡಿಸುವ ವಿಷಯದೊಂದಿಗೆ ದೈಹಿಕ ಶಿಕ್ಷಣ ವಿಭಾಗದ ಶಿಕ್ಷಕಿ ಮರಿಯಾ ಜಾರ್ಜ್ ಅವರ ನೇತೃತ್ವದಲ್ಲಿ 'ಯೋಗ ನೃತ್ಯ'ವನ್ನು ಪ್ರದರ್ಶಿಸಲಾಯಿತು. ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಡಾ. ಎಂ. ಆರ್. ದಿನು ಯೋಗ ಪ್ರದರ್ಶನದ ನೇತೃತ್ವ ವಹಿಸಿದ್ದರು. ಪಿ. ಆರ್. ಅಮರನಾಥ್ ಮತ್ತು ಆರ್. ಅನಂತನ್ ಭಾಷಣ ಮಾಡಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries