ಕಾಸರಗೋಡು: ನಗರದ ಬಿಇಎಂ ಹೈಯರ್ ಸೆಕೆಂಡರಿ ಶಾಲಾ ಪ್ರವೇಶೋತ್ಸವ ಸಂಭ್ರಮದಿಂದ ನೆರವೇರಿತು. ಕಾರ್ಯಕ್ರಮಕ್ಕೆ ಮೊದಲು ಶಾಲಾ ವಿದ್ಯಾರ್ಥಿಗಳಿಂದ ಮೆರವಣಿಗೆ ನಡೆಯಿತು. ಶಾಲಾ ಪ್ರಾಂಶುಪಾಲ ರಾಜೇಶ್‍ಚಂದ್ರ, ಮುಖ್ಯಶಿಕ್ಷಕ ಗಣೇಶ್, ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ ಸಮಿತಿ ಅಧ್ಯಕ್ಷ ಡಾ> ಕೆ.ಎನ್. ವೆಂಕಟ್ರಮಣ ಹೊಳ್ಳ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಪ್ರೇಮ್‍ಜಿತ್, ಶಾಲಾ ಸಿಬ್ಬಂದಿ ಕಾರ್ಯದರ್ಶಿ ಯಶವಂತ್, ಬಾಲಕೃಷ್ಣ ಮಾಸ್ಟರ್ ಹಾಗೂ ಶಾಲಾ ಸಿಬ್ಬಂದಿ, ಪಿಟಿಎ ಸಮಿತಿಯ ಸದಸ್ಯರು, ಮಕ್ಕಳ ಪೆÇೀಷಕರು ಭಾಗವಹಿಸಿದ್ದರು.
ಬಾಲ ಭವನ ಆಂಗ್ಲ ಮಾಧ್ಯಮ ಶಾಲೆ:
ಕಾಸರಗೋಡು ಅಶ್ವಿನಿ ನಗರದ ಬಾಲ ಭವನ ಆಂಗ್ಲ ಮಾಧ್ಯಮ ಶಾಲೆ ಶಾಲಾ ಪ್ರವೇಶೋತ್ಸವವು ಭವ್ಯ ಮೆರವಣಿಗೆಯೊಂದಿಗೆ ಜರುಗಿತು. ಶಾಲಾ ಮುಖ್ಯ ಶಿಕ್ಷಕಿ ಲೀಲಾವತಿ ನಾಯರ್, ಅಕಾಡಮಿಕಲ್ ಎಡ್‍ವೈಸರ್ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ, ನಗರ ಸಭಾ ಸದಸ್ಯೆ ಪವಿತ್ರ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಗುರುದತ್ತ್ ಪೈ, ಉಪಾಧ್ಯಕ್ಷ ಸಲಾಂ, ಕೋಶಾಧಿಕಾರಿ ಪ್ರಕಾಶ್ ಹಾಗೂ ಸಮಿತಿಯ ಸದಸ್ಯರು, ಶಾಲಾ ಸಿಬ್ಬಂದಿ, ಮಕ್ಕಳ ಪೆÇೀಷಕರು ಪಾಲ್ಗೊಂಡಿದ್ದರು.






