HEALTH TIPS

ಛತ್ತೀಸಗಢ: ನಕ್ಸಲರ ಹಿರಿಯ ನಾಯಕ ಹತ

ಬಿಜಾಪುರ: ಛತ್ತೀಸಗ‌ಢದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ನಕ್ಸಲರ ಹಿರಿಯ ನಾಯಕ ಸುಧಾಕರ್‌ ಹತರಾಗಿದ್ದಾರೆ ಎಂದು ಉನ್ನತ ಮೂಲಗಳು ಗುರುವಾರ ತಿಳಿಸಿವೆ. 

ಮಾವೊಗಳ ಕೇಂದ್ರ ಸಮಿತಿ ಸದಸ್ಯ ಗೌತ‌ಮ್‌ ಅಲಿಯಾಸ್‌ ಸುಧಾಕರ್‌ ಅವರ ಪತ್ತೆಗಾಗಿ ₹40 ಲಕ್ಷ ಬಹುಮಾನ ಘೋಷಿಸಲಾಗಿತ್ತು.

ಇತ್ತೀಚೆಗಷ್ಟೇ, ಸಿಪಿಐ (ಮಾವೋವಾದಿ) ಪಕ್ಷದ ಪ್ರಧಾನ ಕಾರ್ಯದರ್ಶಿ ನಂಬಾಲಾ ಕೇಶವ್‌ ರಾವ್‌ ಅಲಿಯಾಸ್‌ ಬಸವರಾಜು ಅವರು ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದರು. ಅದಾದ ಕೆಲವೇ ದಿನಗಳಲ್ಲಿ ನಕ್ಸಲರ ಮತ್ತೊಬ್ಬ ಹಿರಿಯ ನಾಯಕ ಎನ್‌ಕೌಂಟರ್‌ಗೆ ಬಲಿಯಾಗಿದ್ದಾರೆ. ಆದರೆ, ಸುಧಾಕರ್‌ ಅವರ ಸಾವನ್ನು ಅಧಿಕೃತವಾಗಿ ಇಲ್ಲಿಯವರೆಗೆ ಘೋಷಿಸಲಾಗಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries