ಮುಳ್ಳೇರಿಯ: ಮುಳ್ಳೇರಿಯ ಕಯ್ಯಾರ ಕಿಞ್ಞಣ್ಣ ರೈ ಗ್ರಂಥಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಾಲವೇದಿಕೆಯ ಸಾಮಾನ್ಯ ಸಭೆ ಮತ್ತು ವರ್ಣಕುಟೀರ- ರೀಡಿಂಗ್ ಗ್ಯಾಲರಿ ಕಾರ್ಯಕ್ರಮದ ಬಹುಮಾನ ವಿತರಣೆ ಶನಿವಾರ ನಡೆಯಿತು. ಗ್ರಂಥಾಲಯದ ಹಿರಿಯ ಸದಸ್ಯ ಗೋಪಾಲಕೃಷ್ಣ ಭಟ್ ಬಹುಮಾನ ಪ್ರದಾನ ಮಾಡಿದರು. ವಿನ್ಯಾ ಎಸ್. ಯಾದವ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅನುಷಾ ಪಿ.ಕೆ ಸ್ವಾಗತಿಸಿದರು. ಕೆ.ಕೆ. ಮೋಹನನ್, ಕೆ.ಕೆ. ರಂಜಿತಿ ಮತ್ತು ಸಂದೀಪ್ ಬಿ ಮಾತನಾಡಿದರು. ಅದ್ವೈದ್ ಕೆ.ಎಸ್. ವಂದಿಸಿದರು.
ಬಾಲವೇದಿಯ ಕಾರ್ಯಕ್ಕಾಗಿ 13 ಸದಸ್ಯರ ಸಮಿತಿಯನ್ನು ಸಹ ಆಯ್ಕೆ ಮಾಡಲಾಯಿತು. ಪದಾಧಿಕಾರಿಗಳು ಅಧ್ಯಕ್ಷರು ಕೀರ್ತನಾ ಮಹೇಶ್, ಕಾರ್ಯದರ್ಶಿ ಅನಯ ಬಿ.ಸಿ, ಜೊತೆ ಕಾರ್ಯದರ್ಶಿ ಅದ್ವೈದ್ ಕೆ.ಎಸ್., ಉಪಾಧ್ಯಕ್ಷ ವಿನ್ಯಾ ಎಸ್. ಯಾದವ್, ಸದಸ್ಯರು ಅಭಿರಾಮ್ ಬಿ.ಸಿ. ಅನುಶ್ರೀ ಅರವಿಂದ್, ರೇವತಿ ರಾಜೇಶ್ ಕೆ., ಆರ್ಯ ಕೆ.ಎಸ್., ಅಶ್ವಿನ್ ಎಂ.ಎಸ್., ರಿತು ರಾಜನ್ ಎ.ಆರ್. ಶ್ಯಾಂರಾಜ್ .ಸಿ., ಅನಜ್ ವಿಜಯ, ಅನುಷಾ .ಪಿ.ಕೆ.ಅವರನ್ನು ಆಯ್ಕೆಮಾಡಲಾಯಿತು.






