ಬದಿಯಡ್ಕ: ಕಳೆದ ವಾರ ಹಠಾತ್ ಸುರಿದ ಭಾರೀ ಮಳೆಗೆ ಕೃಷಿ ತೋಟದ ಮೇಲ್ಗಡೆಯ ಬೃಹತ್ ಗುಡ್ಡ ಕುಸಿದು ವ್ಯಾಪಕ ಹಾನಿ ಸಂಭವಿಸಿರುವುದು ಕಳವಳಕ್ಕೆ ಕಾರಣವಾಗಿದೆ.
ಮಧೂರು ಗ್ರಾ.ಪಂ.ವ್ಯಾಪ್ತಿಯ ಕೊಲ್ಲಂಗಾನ ಪಜ್ಜ ಎಂಬಲ್ಲಿ ನಿರಂತರ ಸುರಿದ ಮಳೆಗೆ ಗುಡ್ಡ ಕುಸಿತ ಉಂಟಾಗಿದೆ. ಅರ್ಧ ಎಕ್ರೆಗಿಂತಲೂ ಹೆಚ್ಚಿನ ಗುಡ್ಡ ನೀರು ಹರಿವಿನ ರಭಸಕ್ಕೆ ಬೃಹತ್ ಪ್ರಮಾಣದಲ್ಲಿ ಕುಸಿದು ಬಿದ್ದಿದೆ. ಗುಡ್ಡ ಕುಸಿತದ ಪರಿಣಾಮ ಮಳೆ ನೀರು ಹರಿಯುವ ತೋಡು ಸಂಪೂರ್ಣ ಮುಚ್ಚಿಹೋಗಿದ್ದು, ವ್ಯಾಪಕ ಪ್ರಮಾಣದ ನೀರು ಪರಿಸರದ ಎಕ್ರೆಗಟ್ಟಲೆ ಅಡಿಕೆ ತೋಟಕ್ಕೆ ನುಗ್ಗಿ ಎರಡೂವರೆ ಫೀಟ್ ಗಳಷ್ಟು ಕಟ್ಟಿನಿಂತಿತು. ಇದೀಗ ತೋಟಗಳು ಸಂಪೂರ್ಣ ಹೂಳುಗಳಿಂದ ತುಂಬಿಕೊಂಡು ಬೆಳೆಹಾನಿ ಉಂಟಾಗಿದೆ.
ಸ್ಥಳೀಯ ಸಾವಿತ್ರಿ ಅಮ್ಮ, ಗಂಗಾದೇವಿ, ನಾಸಿರ್ ಎಂಬವರ ಅಡಿಕೆ ತೋಟಗಳಿಗೆ ಮಳೆ ನೀರು ತುಂಬಿ ಅಪಾರ ಹಾನಿಯಾಗಿದೆ. ಘಟನಾ ಸ್ಥಳಕ್ಕೆ ಗ್ರಾ.ಪಂ.ಸದಸ್ಯರು, ಕೃಷಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿರುವರು.





.jpg)

