ಉಪ್ಪಳ: ಕಾಸರಗೋಡು ಜಿಲ್ಲಾ ಬಿಜೆಪಿಯೊಳಗೆ ಹೊಗೆಯಾಡುತ್ತಿದ್ದ ಅತೃಪ್ತಿ ಇದೀಗ ಕೆನ್ನಾಲಿಗೆ ಚಾಚಿದ್ದು, ರಾಜಿನಾಮೆ ಪರ್ವ ಆರಂಭಗೊಂಡಿದೆ.
ಬಿಜೆಪಿ ಜಿಲ್ಲಾ ನಾಯಕತ್ವವು, ಪಕ್ಷದ ಮುಖಂಡರ ನಡೆಗಳನ್ನು ಪ್ರಶ್ನಿಸುವ ಕಾರ್ಯಕರ್ತನನ್ನು ಉಚ್ಛಾಟಿಸಿದ ನಡೆ ಸಮರ್ಥನೀಯವಲ್ಲ. ಯಾವುದೇ ವೈಯಕ್ತಿಕ ನಿರೀಕ್ಷೆಗಳಿಲ್ಲದೆ ಪಕ್ಷಕ್ಕಾಗಿ ದುಡಿಯುವ ಕಾರ್ಯಕರ್ತನಿಗೆ ನಾಯಕತ್ವವನ್ನು ಸದಾ ಪ್ರಶ್ನಿಸುವ ಅಧಿಕಾರ ಇದ್ದೇ ಇರುತ್ತದೆ. ಯಾವನೇ ಒಬ್ಬ ಕಾರ್ಯಕರ್ತನನ್ನು ಪಕ್ಷದಿಂದ ಉಚ್ಛಾಟಿಸುವುದು ಬಿಜೆಪಿ ತತ್ವಕ್ಕೆ ವಿರುದ್ಧವಾಗಿದೆ ಎಂದು ತಿಳಿಸಿ ಬಿಜೆಪಿ ಮಂಜೇಶ್ವರ ಮಂಡಲ ಸಕ್ರಿಯ ಸದಸ್ಯ ಸುಬ್ರಹ್ಮಣ್ಯ ಭಟ್(ಕೀರ್ತಿ ಭಟ್) ಮಂಡಲ ಸಮಿತಿಗೆ ರಾಜಿನಾಮೆ ನೀಡಿರುವುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅತೃಪ್ತಿ ಏಕೆ?:
ಬಿಜೆಪಿ ಜಿಲ್ಲಾಧ್ಯಕ್ಷೆಯ ಅಪ್ರಬುದ್ಧ ನಡೆಗಳನ್ನು ಇತ್ತೀಚೆಗೆ ಕಾರ್ಯಕರ್ತರು ಪ್ರಶ್ನಿಸುತ್ತಿದ್ದು, ಬಿಜೆಪಿ ಮಂಜೇಶ್ವರ ಮಂಡಲ ಯುವ ಸದಸ್ಯ ಪ್ರಶಾಂತ್ ಕೆ.ಪಿ.ಜೋಡುಕಲ್ಲು ಅವರು ಈ ಬಗ್ಗೆ ಪದೇಪದೇ ಪ್ರಶ್ನಿಸುತ್ತಿರುವುದರಿಂದ ಬಿಜೆಪಿ ಜಿಲ್ಲಾಧ್ಯಕ್ಷೆ ಏಕಾಏಕಿ ಪ್ರಶಾಂತ್ ಅವರನ್ನು ಪಕ್ಷದಿಂದ ಉಚ್ಛಾಟಿಸಿದ್ದರು. ಪಕ್ಷದ ಸಕ್ರಿಯ ಸದಸ್ಯರಾದ ಪ್ರಶಾಂತ್ ಅವರ ಉಚ್ಛಾಟನೆಯ ಬಳಿಕ ಪಕ್ಷದ ಮೂಲ ನಿಷ್ಠಾವಂತ ಕಾರ್ಯಕರ್ತರಿಗೆ ತೀವ್ರ ಅತೃಪ್ತಿಗೆ ಕಾರಣವಾಗಿದ್ದು, ಪೈವಳಿಕೆ ಸಹಿತ ವಿವಿಧ ಪಂಚಾಯತಿಗಳ ಬಿಜೆಪಿ ಕಾರ್ಯಕರ್ತರು ಈಗಾಗಲೇ ಬಹಿರಂಗ ಹೇಳಿಕೆ ಕೊಡುವ ಮೂಲಕ ಜಿಲ್ಲಾ ಸಮಿತಿಗೆ ಚುರುಕು ಮುಟ್ಟಿಸಿದ್ದಾರೆ.




-SUBRAMANYA%20BHAT(KEERTHI%20BHAT).jpg)

