ಕೋಝಿಕೋಡ್: ಬಿಜೆಪಿ ನಾಯಕ ಎ.ಪಿ.ಅಬ್ದುಲ್ಲ ಕುಟ್ಟಿ ಅವರು ಈದ್ ಹಿನ್ನೆಲೆಯಲ್ಲಿ ವಿವಾದಿತ ಟಾಟಾ ಜುಡಿಯೋಗೆ ತೆರಳಿ ರೂ. 299 ಗೆ ಕೂಲ್ ಶೂಗಳನ್ನು ಖರೀದಿಸಿ ಸುದ್ದಿಯಲ್ಲಿದ್ದಾರೆ.
ಈ ಈದ್‍ಗೆ ಟಾಟಾ ಝುಡಿಯೊವನ್ನು ಬಹಿಷ್ಕರಿಸುವಂತೆ ಜಮಾತೆ-ಇ-ಇಸ್ಲಾಮಿಯ ವಿದ್ಯಾರ್ಥಿ ಸಂಘಟನೆಯಾದ ಎಸ್‍ಐಒ ನೀಡಿದ ಕರೆಯನ್ನು ಅಬ್ದುಲ್ಲಕುಟ್ಟಿ ಧಿಕ್ಕರಿಸಿ ಈ ಖರೀದಿ ನಡೆಸಿದ್ದಾರೆ. ಅಬ್ದುಲ್ಲಕುಟ್ಟಿ ಅವರ ಬಹಿರಂಗ ಕ್ರಮವನ್ನು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಹಂಚಿಕೊಂಡ ಪೋಸ್ಟ್‍ನಲ್ಲಿ ಬಿಂಬಿಸಲಾಗಿದೆ.
ಅಬ್ದುಲ್ಲಕುಟ್ಟಿ ಅವರ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಪೋಸ್ಟ್ ಇಂತಿದೆ:
ಎಲ್ಲರಿಗೂ ಈದ್ ಶುಭಾಶಯಗಳು
ನಾನು ಈದ್‍ಗಾಗಿ ಶಾಪಿಂಗ್ ಮಾಡುವವನಲ್ಲ.
ಈ ಬಾರಿ ನಾನು ಟಾಟಾ ಜುಡಿಯೊಗೆ ಭೇಟಿ ನೀಡಿ ಒಂದು ಜೋಡಿ ಶೂಗಳನ್ನು ಖರೀದಿಸಿದೆ. ರೂ. 299.ಅಗ್ಗದ ಬೆಲೆಗೆ. ನಾನು ಮೊದಲು ಟಾಟಾ ಕಾರುಗಳನ್ನು ಬಳಸುತ್ತಿದ್ದೆ, ಆರಂಭದಲ್ಲಿ ಇಂಡಿಗೋ, ನಂತರ ಹ್ಯಾರಿಯರ್, ಮತ್ತು ಈಗ ನನ್ನ ಮಗನಿಗೆ ಆಕ್ಸಿಸ್ ಬ್ಯಾಂಕಿನಲ್ಲಿ ಕೆಲಸ ಲಭಿಸಿದಾಗ, ನಾನು ಟಾಟಾದ ಕರ್ವ್ ಅನ್ನು ಖರೀದಿಸಿದೆ.
ಎಸ್. ಐ. ಒ. ಜಮಾತ್ ಇಸ್ಲಾಮಿಯ ಉಗ್ರಗಾಮಿ ವಿಚಾರಗಳ ಶಾಲೆಯಾಗಿದೆ. ಈ ಪೆÇೀಸ್ಟ್ ಅವರ ಟಾಟಾ ಉತ್ಪನ್ನಗಳಾದ ಜುಡಿಯೊವನ್ನು ಬಹಿಷ್ಕರಿಸುವ ರಾಷ್ಟ್ರವಿರೋಧಿ ಕಲ್ಪನೆಯ ವಿರುದ್ಧದ ಪ್ರತಿಭಟನೆಯಾಗಿದೆ # ಈದುಲ್ ಅಧಾ # 2025






