HEALTH TIPS

ಏರ್‌ ಇಂಡಿಯಾ ವಿಮಾನ ಅಪಘಾತ: ವಿಮೆ ಕ್ಲೇಮು ತ್ವರಿತ ಇತ್ಯರ್ಥ- ಎಲ್‌ಐಸಿ

ನವದೆಹಲಿ: ಏರ್‌ ಇಂಡಿಯಾ ವಿಮಾನ ಅಪಘಾತದ ಸಂತ್ರಸ್ತರ ವಿಮೆಯ ಕ್ಲೇಮುಗಳ ಇತ್ಯರ್ಥ ಪ್ರಕ್ರಿಯೆಯನ್ನು ಸರಳ ಮತ್ತು ತ್ವರಿತಗೊಳಿಸಿರುವುದಾಗಿ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಶುಕ್ರವಾರ ತಿಳಿಸಿದೆ.

ವಿಮಾನ ಅಪಘಾತದಿಂದ ಪಾಲಿಸಿದಾರನು ಮೃತಪಟ್ಟಿರುವುದಾಗಿ ಸರ್ಕಾರದ ದಾಖಲೆ ಅಥವಾ ಕೇಂದ್ರ/ರಾಜ್ಯ ಸರ್ಕಾರ ಅಥವಾ ವಿಮಾನ ಪ್ರಾಧಿಕಾರದಿಂದ ಪಡೆದ ಪರಿಹಾರದ ದಾಖಲೆಯನ್ನು ಮರಣದ ಪ್ರಮಾಣ ಪತ್ರವನ್ನಾಗಿ ಅಂಗೀಕರಿಸಲಾಗುವುದು ಎಂದು ತಿಳಿಸಿದೆ.

ಹಕ್ಕುದಾರರು ತಮ್ಮ ಹತ್ತಿರುವ ಎಲ್‌ಐಸಿ ಶಾಖೆ ಅಥವಾ ವಿಭಾಗವನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗೆ 022-68276827 ಕರೆ ಮಾಡಬಹುದು ಎಂದು ತಿಳಿಸಿದೆ.

ಬಜಾಜ್‌ ಅಲಯನ್ಸ್ ಲೈಫ್‌ ಇನ್ಶೂರೆನ್ಸ್ ಸಹ ಕ್ಲೇಮುಗಳ ತ್ವರಿತ ವಿಲೇವಾರಿಗೆ ಡೆಸ್ಕ್‌ ಅನ್ನು ಸ್ಥಾಪಿಸಿದೆ. ತ್ವರಿತವಾಗಿ ಕ್ಲೇಮುಗಳನ್ನು ಇತ್ಯರ್ಥಪಡಿಸುವುದಾಗಿ ತಿಳಿಸಿದೆ. ಪಾಲಿಸಿದಾರರ ಕುಟುಂಬಗಳಿಗೆ ಸಹಾಯ ಮಾಡಲು ಈ ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries