ಬದಿಯಡ್ಕ: ಸೇವಾ ಭಾರತೀ ಬದಿಯಡ್ಕ ಪಂಚಾಯಿತಿ ಘಟಕದ ವತಿಯಿಂದ ಅಂತಾರಾಷ್ಟ್ರೀಯ ಯೋಗ ದಿನದ ಭಾಗವಾಗಿ ಬದಿಯಡ್ಕ ಶ್ರೀ ಗಣೇಶಮಂದಿರದಲ್ಲಿ ಯೋಗ ದಿನಾಚರಣೆ ನಡೆಯಿತು. ಖ್ಯಾತ ಶ್ವಾಸಕೋಶತಜ್ಞ. ಡಾ. ನಾರಾಯಣಪ್ರದೀಪ ಪೆರ್ಮುಖ ದೀಪಬೆಳಗಿಸಿ ಚಾಲನೆ ನೀಡಿದರು. ನಿವೃತ್ತ ಅಧ್ಯಾಪಿಕೆ ಯೋಗ ಶಿಕ್ಷಕಿ ಕವಿತಾ ಟೀಚರ್ ಬದಿಯಡ್ಕ ವಿವಿಧ ಆಸನಗಳನ್ನು ಪ್ರದರ್ಶಿಸಿದರು. ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು, ಸೇವಾ ಭಾರತಿ ಬದಿಯಡ್ಕ ಪಂಚಾಯಿತಿ ಘಟಕದ ಪದಾಧಿಕಾರಿಗಳು, ಕಾರ್ಯಕಾರಿ ಸದಸ್ಯರು ಭಾಗವಹಿಸಿದ್ದರು. ಸೇವಾಭಾರತಿ ಬದಿಯಡ್ಕ ಘಟಕ ಅಧ್ಯಕ್ಷ ಸದಾಶಿವ ಮಾಸ್ತರ್ ಬೇಳ ಸ್ವಾಗತಿಸಿದರು.




.jpg)
