ಕಾಸರಗೋಡು: ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯ ಕಾಸರಗೋಡು ವತಿಯಿಂದ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಖ್ಯಾತ ನೇತ್ರ ತಜ್ಞ ಡಾ. ಅನಂತ ಕಾಮತ್ ಸಮಾರಂಭ ಉದ್ಘಾಟಿಸಿದರು. ಜೀವ ವಿಮಾ ನಿಗಮದ ವಿಭಾಗೀಯ ಅಧಿಕಾರಿ ಮೋಹನ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಕಾಸರಗೋಡು ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಸಂಚಾಲಕಿ ರಾಜಯೋಗಿನಿ ಬಿ. ವಿಜಯಲಕ್ಷ್ಮೀ ಯೋಗ ದಿನಾಚರಣೆ ಬಗ್ಗೆ ಮಾಹಿತಿ ನೀಡಿದರು. ಡಾ. ಆಯಿಷಾ ಶನ, ಭಾಗ್ಯಲಕ್ಷ್ಮೀ, ವಾಣೀ, ರಾಜಯೋಗಿನಿ ಬಿ.ಕೆ ಮಂಗಳ ಉಪಸ್ಥಿತರಿದ್ದರು.
ಕುಮಾರಿಯರಾದ ಮುಕ್ತಿ ಮತ್ತು ಮೋಕ್ಷಾ ಅವರಿಂದ ಯೋಗ ಪ್ರದರ್ಶನ ನಡೆಯಿತು. ಬಿ.ಕೆ ಶ್ವೇತಾ ಸ್ವಾಗತಿಸಿದರು. ರೇಶ್ಮಾ ಸಂಸ್ಥೆಯ ಕಿರು ಪರಿಚಯ ನೀಡಿದರು. ವಾಣಿ ವಂದಿಸಿದರು.





