ಮಂಜೇಶ್ವರ: ಮೀಯಪದವು ಶ್ರೀ ವಿದ್ಯಾವರ್ಧಕ ಪ್ರೌಢ ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು. ಶಾಲಾ ಸಂಚಾಲಕ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ, ಯೋಗವು ಜಗತ್ತಿಗೆ ಭಾರತದ ಅಮೂಲ್ಯ ಕೊಡುಗೆಯಾಗಿದ್ದು. ಪ್ರಸ್ತುತ ಕಾಲಘಟ್ಟದಲ್ಲಿ ಯೋಗದ ಜನಪ್ರಿಯತೆ ಮುನ್ನಲೆಗೆ ಬಂದಿದೆ. ಮನುಷ್ಯನ ಜೀವನ ಕ್ರಮ ಹಳಿ ತಪ್ಪಿದ್ದು ಸ್ವಾಸ್ಥ್ಯ ಹಾಗೂ ಆರೋಗ್ಯಪೂರ್ಣ ಬದುಕು ಕಟ್ಟಿಕೊಳ್ಳಲು ಯೋಗಾಭ್ಯಾಸ ಅತಿ ಅವಶ್ಯಕ ಎಂದು ಅಭಿಪ್ರಾಯ ಪಟ್ಟರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಯೋಗ ಗುರು ಮಂಗಳೂರು ವಿಶ್ವವಿದ್ಯಾಲಯದ ಮಾನವ ಪ್ರಜ್ಞೆ ಹಾಗೂ ಯೋಗ ವಿಜ್ಞಾನ ವಿಭಾಗದ ಉಪನ್ಯಾಸಕ ವಿನಾಯಕ ಕೃಷ್ಣ ಅವರು ಮಕ್ಕಳಿಗೆ ಯೋಗ ಹಾಗೂ ಪ್ರಾಣಾಯಾಮಗಳ ಕ್ರಮಬದ್ಧ ಬಳಕೆಯಿಂದ ಮಾನವನ ಒತ್ತಡ ಜೀವನ ಹಗುರವಾಗಬಲ್ಲದು. ಇಂದಿನ ಮಕ್ಕಳು ಎಳವೆಯಲ್ಲೆ ಎದುರಿಸುವ ಅನೇಕ ತೆರನಾದ ಸಮಸ್ಯಗಳಿಗೆ ಯೋಗಾಭ್ಯಾಸ ದಿವ್ಯ ಔಷಧ ಎಂದು ಮಾಹಿತಿ ನೀಡಿದರು.
ಶಾಲಾ ಪ್ರಾಂಶುಪಾಲ ರಮೇಶ ಕೆ.ಎನ್, ಪ್ರಭಾರ ಮುಖ್ಯ ಶಿಕ್ಷಕ ಕಿರಣ್ ಕೆ.ಎಸ್. ಹಾಗೂ ದೈಹಿಕ ಶಿಕ್ಷಕ ಗ್ಯಾರಿ ಗಿಲ್ಮೋರ್ ಅವರು ಶುಭ ಹಾರೈಸಿದರು. ಕನ್ನಡ ಅಧ್ಯಾಪಕ ರಾಜಾರಾಮ್ ಸ್ವಾಗತಿಸಿ, ಕನ್ನಡ ಶಿಕ್ಷಕಿ ಸುಧಾ ಕೆ.ಎಂ. ವಂದಿಸಿದರು. ಸಂಸ್ಕøತ ಶಿಕ್ಷಕ ಡಾ. ವಿಘ್ನೇಶ್ ಶರ್ಮ ನಿರೂಪಿಸಿದರು. ಯೋಗ ಗುರು ವಿನಾಯಕ ಕೃಷ್ಣ ಅವರು ಕಾರ್ಯಕ್ರಮದಲ್ಲಿ ಮಕ್ಕಳಿಗಾಗಿ ಹಲವು ಯೋಗ ಭಂಗಿಗಳ ಪ್ರಾತ್ಯಕ್ಷಿಕೆ ತರಬೇತಿ ನೀಡಿದರು.




.jpg)
.jpg)
