ಕಾಸರಗೋಡು: ನಿವೃತ್ತ ಎಸ್‍ಐ ಶಹಜಹಾನ್ ಅವರು ಮಾದಕ ದ್ರವ್ಯ ವಿರುದ್ಧ ಹಮ್ಮಿಕೊಂಡಿರುವ ಸಂದೇಶ ಯಾತ್ರೆಗೆ ಮಕ್ಕಳ ರಕ್ಷಣಾ ತಂಡದ ರಾಷ್ಟ್ರೀಯ ಸಮಿತಿ ಮತ್ತು ಶಾಲಾ ರಕ್ಷಣಾ ಗುಂಪು (ಎಸ್‍ಪಿಜಿ)ನ ವತಿಯಿಂದ ಕಾಸರಗೋಡಿನಲ್ಲಿ ಸ್ವಾಗತ ಆಯೋಜಿಸಲಾಯಿತು. ಕಾಸರಗೋಡು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಸಮಾರಂಭ ಆಯೋಜಿಸಲಾಗಿತ್ತು.
ಕೊಲ್ಲಂ ಜಿಲ್ಲೆಯಲ್ಲಿ ಎಸ್‍ಐ ಆಗಿ ಸೇವೆಯಿಂದ ನಿವೃತ್ತರಾದ ಎ. ಶಹಜಹಾನ್, ರಾಜ್ಯದ ಹದಿನಾಲ್ಕು ಜಿಲ್ಲೆಗಳಲ್ಲಿ 2025 ಕಿ.ಮೀ ದೂರವನ್ನು ಸೈಕಲ್ ಮೂಲಕ ಕ್ರಮಿಸಿ, ಹನ್ನೊಂದನೇ ದಿನ ಕಾಸರಗೋಡಿಗೆ ತಲುಪಿದ್ದರು. ಸಾರ್ವಜನಿಕ ಪ್ರದೇಶಗಳು, ಶಾಲಾ, ಕಾಲೇಜು ಹಾಗೂ ಸಂಘ ಸಂಸ್ಥೆಗಳ ಮೂಲಕ ಜಾಗೃತಿ ಕಾರ್ಯಕ್ರಮ ಆಯೋಜಿಸುವ ಮೂಲಕ ಯಾತ್ರೆ ಮುಂದುವರಿಸಲಾಗಿತ್ತು.
ಕಾಸರಗೋಡು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಸ್ವಾಗತ ಸಮಾರಂಭದಲ್ಲಿ ಕಾಸರಗೋಡು ನಗರಠಾಣೆ ಎಸ್‍ಐ ಕೆ.ರಾಜೀವನ್ ಸಮಾರಂಭ ಉದ್ಘಾಟಿಸಿದರು. ಚೈಲ್ಡ್ ಪೆÇ್ರಟೆಕ್ಟ್ ಟೀಮ್ ರಾಷ್ಟ್ರೀಯ ಅಧ್ಯಕ್ಷ ಸಿ.ಕೆ. ನಾಸರ್ ಅಧ್ಯಕ್ಷತೆ ವಹಿಸಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಉಷಾ, ಚೈಲ್ಡ್ ಪೆÇ್ರಟೆಕ್ಟ್ ಟೀಮ್ ರಾಷ್ಟ್ರೀಯ ಸಮಿತಿ ಕೋಶಾಧಿಕಾರಿ ಡಾ. ಸಿ.ಟಿ. ಮುಹಮ್ಮದ್ ಮುಸ್ತಫಾ ಮೊದಲಾದವರು ಶಹಜಾನ್ ಅವರನ್ನು ಹೂಗುಚ್ಛ ನೀಡಿ ಗೌರವಿಸಿದರು. ಸಿವಿಲ್ ಪೆÇಲೀಸ್ ಅಧಿಕಾರಿಗಳಾದ ಅಶ್ವತಿ ರಾಜೇಶ್, ಸುಧೀಶ್ ಅಜಯನ್, ಶಿಕ್ಷಕರಾದ ಮದನನ್ ಸಿ.ಕೆ. ಅಬ್ದುಲ್ ರಹೀಮ್, ಆನ್ಸಿ ಕೆ. ಮ್ಯಾಥ್ಯೂ ಮೊದಲಾದವರಉ ಉಪಸ್ಥಿತರಿದ್ದರು. ಪ್ರಾಂಶುಪಾಲ ಸುನಿಲ್ ಕುಮಾರ್ ಸ್ವಾಗತಿಸಿದರು. ಪಿಟಿಎ ಅಧ್ಯಕ್ಷ ಅಬೂಬಕರ್ ತುರುತ್ತಿ ವಂದಿಸಿದರು.




