ಕಾಸರಗೋಡು: ಬೇಕಲದ ಕಾಪ್ಪಿಲ್‍ನ ಹೋಮ್‍ಸ್ಟೇ ಒಂದರಲ್ಲಿ ಸಂಶಯಾಸ್ಪದ ಸ್ಥಿತಿಯಲ್ಲಿ ಕಂಡುಬಂದ ಇಬ್ಬರನ್ನು ಸ್ಥಳೀಯರು ಸೆರೆಹಿಡಿದು ಪೆÇಲೀಸರಿಗೆ ಒಪ್ಪಿಸಿದ್ದಾರೆ. ಉತ್ತರ ಪ್ರದೇಶ ಮೂಲದ ಅತುಲ್ ಸಿಂಗ್ (32) ಮತ್ತು ಶಹಜಹಾನ್ (33) ಬೇಕಲ್ ಪೆÇಲೀಸರ ವಶದಲ್ಲಿರುವವರು.
ಮಂಗಳವಾರ ರಾತ್ರಿ ಹೋಮ್‍ಸ್ಟೇ ಸನಿಹ ಇಬ್ಬರೂ ಅನುಮಾನಾಸ್ಪದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸ್ಥಳೀಯರು ಅವರನ್ನು ತಡೆದು ವಿಚಾರಣೆಗೊಳಪಡಿಸಿದಾಗ ಅವರು ಪರಸ್ಪರ ವಿರುದ್ಧ ಹೇಳಿಕೆ ನೀಡಿದ್ದರು. ಇದರಿಂದ ಸಂಶಯಗೊಂಡು ಬೇಕಲ್ ಪೆÇಲೀಸರಿಗೆ ಮಾಹಿತಿ ನೀಡಿದ್ದರು.




